ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ರಾಜ್ಯದ ಎಲ್ಲ ಶಾಲೆಗಳಿಗೆ ಸೆಪ್ಟೆಂಬರ್ 20ರಂದು ಅಕ್ಟೋಬರ್ 7ರ ತನಕ ದಸರಾ ರಜೆ ಘೋಷಿಸಲಾಗಿದೆ. ಇದರಲ್ಲಿ ಗಾಂಧಿ ಹಾಗೂ ವಾಲ್ಮೀಕಿ ಜಯಂತಿಯ ರಜೆಗಳು ಸಹ ಒಳಗೊಂಡಿವೆ. ಶಿಕ್ಷಣ ಇಲಾಖೆ ಹೊರಡಿಸಿದ ಪ್ರಕಾರ 18 ದಿನಗಳ ಕಾಲ ಶಾಲೆಗಳಿಗೆ ರಜೆ ಸಿಗಲಿದೆ. ವಿದ್ಯಾರ್ಥಿಗಳನ್ನು ಹಬ್ಬವನ್ನು ಸಂಭ್ರಮದಿಂದ ಆಚರಿಸಬಹುದಾಗಿದೆ. ಈ ವೇಳೆ ಶಿಕ್ಷಕರನ್ನು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಾ ಇಲ್ಲವಾ ಎಂದು ತಿಳಿದು ಬರಬೇಕಿದೆ. ಸೆಪ್ಟೆಂಬರ್ 22ರಿಂದ ಸಮೀಕ್ಷೆ ಶುರುವಾಗಲಿದೆ.