ಪ್ರಜಾಸ್ತ್ರ ಸುದ್ದಿ
ತುಮಕೂರು(Tumakoru): ಪೊಲೀಸರನ್ನು ಆರಕ್ಷಕರು ಎನ್ನುತ್ತಾರೆ. ಆದರೆ ಇಲ್ಲಿ ರಕ್ಷಕರೆ ಭಕ್ಷಕರಾದ ಘಟನೆ ಗೃಹ ಸಚಿವ ಜಿ.ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲೇ ನಡೆದಿದೆ. ಡಿವೈಎಸ್ಪಿ ಹಂತದ ಅಧಿಕಾರಿ ಮಹಿಳೆಯೊಬ್ಬರನ್ನು ದೈಹಿಕವಾಗಿ ಬಳಸಿಕೊಂಡ ವಿಡಿಯೋ ವೈರಲ್ ಆಗಿದೆ. ಜಮೀನು ವ್ಯಾಜ್ಯದ ವಿಚಾರವಾಗಿ ಕೇಳಲು ಬಂದ ಪಾವಗಡ ಮೂಲದ ಮಹಿಳೆಯನ್ನು ತಮ್ಮ ಕಚೇರಿಯಲ್ಲಿಯೇ ಬಳಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮಧುಗಿರಿ ಉಪವಿಭಾಗದ ಡಿವೈಎಸ್ಪಿ ರಾಮಚಂದ್ರಪ್ಪ ಎಂಬುವವರ ವಿರುದ್ಧ ಇಂತಹದೊಂದು ಗಂಭೀರ ಆರೋಪ ಕೇಳಿ ಬಂದಿದೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜಮೀನು ವಿಚಾರವಾಗಿ ಮಹಿಳೆ ದೂರು ನೀಡಿದ್ದಾಳೆ. ಆಕೆಯನ್ನು ವಿಚಾರಣೆಯ ನೆಪದಲ್ಲಿ ಡಿವೈಎಸ್ಪಿ ಕರೆಸಿದ್ದಾರೆ. ನಂತರ ಆಕೆಯನ್ನು ಯಾಮಾರಿಸಿ ಬಲವಂತವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರಂತೆ. ಇದನ್ನು ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು, ಗೃಹ ಸಚಿವರು ಏನು ಹೇಳುತ್ತಾರೆ ನೋಡಬೇಕು.