ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸಿಂದಗಿ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ 60ನೇ ವಾರ್ಷಿಕ ವರದಿ ಕಾರ್ಯಕ್ರಮವನ್ನು ಪಟ್ಟಣದ ಬಸವ ಮಂಟಪದಲ್ಲಿ ಗುರುವಾರ ನಡೆಸಲಾಯಿತು. ಇಂಡಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಕೆ.ಎಚ್ ವಡ್ಡರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ಬ್ಯಾಂಕ್ ಆವರಣದಲ್ಲಿ ಇ-ಸ್ಟಾಂಪ್ ಕೇಂದ್ರಕ್ಕೆ ಚಾಲನೆ ಕೊಟ್ಟರು.
ಭಾರತ ಒಂದು ಸಣ್ಣ ವಿಶ್ವ ಎಂದು ಹೇಳಲಾಗುತ್ತೆ. ಯಾಕಂದರೆ, ಇಲ್ಲಿ ಎಲ್ಲ ಬಗೆಯ ಕೃಷಿ ಪದ್ಧತಿ, ಬೆಳೆಗಳಿವೆ. ಕರ್ನಾಟಕಕ್ಕಿಂತ ಸಣ್ಣದಿರುವ ಇಸ್ರೇಲ್ ದೇಶದ ಕೃಷಿ ಪದ್ಧತಿಯನ್ನು ನಮ್ಮಲ್ಲಿನ ರೈತರು ಅಳವಡಿಸಿಕೊಂಡರೆ ಸಣ್ಣ ರೈತರು ಸಹ ಹೆಚ್ಚಿನ ಲಾಭ ಪಡೆಯಬಹುದು. ಅಂತಹ ರೈತಿಗೆ ಸಹಕಾರಿ ಬ್ಯಾಂಕ್ ಗಳು ಸಹಾಯ ನೀಡುತ್ತವೆ ಎಂದರು. ವಿಜಯಪುರದ ಸಹಕಾರಿ ಅಭಿವೃದ್ಧಿ ಅಧಿಕಾರಿ ಎಂ.ಎಸ್ ರಾಠೋಡ ಮಾತನಾಡಿ, ರೈತ ಸೇವಾ ಕೇಂದ್ರವನ್ನು ಕಳೆದ ಮಾರ್ಚ್ ನಲ್ಲಿ ಪ್ರಾರಂಭಿಸಲಾಗಿದೆ. ಈಗ ಇ-ಸ್ಟಾಂಪ್ ಪ್ರಾರಂಭಿಸಿದ್ದು ರೈತರು ಇದರ ಲಾಭ ಪಡೆಯಬೇಕು ಎಂದರು.
ಪಿಕಾರ್ಡ್ ಬ್ಯಾಂಕ್ ವ್ಯವಸ್ಥಾಪಕ ವೈ.ಎನ್ ಅಥರ್ಗಾ ಅವರು ವರದಿ ಮಂಡಿಸಿದರು. ಕಂದಾಯ ದಾಖಲೆಗಳನ್ನು ರೈತರು ನಮ್ಮಲ್ಲಿ ಪಡೆಯಬಹುದು. 50 ವರ್ಷಗಳಷ್ಟು ಹಳೆಯದಾದ ‘ಡ’ ಉತಾರಿ ನಮ್ಮಲ್ಲಿ ಪಡೆಯಬಹುದು. ಬ್ಯಾಂಕ್ ಅಭಿವೃದ್ಧಿಗೆ ಸಹಕಾರ ನೀಡಿದ, ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದ ರೈತರು ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು. ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದ ಬ್ಯಾಂಕಿನ ಸದಸ್ಯರಾದ ರಾಜುಗೌಡ ಬಿರಾದಾರ, ಹಣಮಂತರಾಯ ಬಿರಾದಾರ, ಗೀತಾ ಕುಂಬಾರ, ಸಂಗಮ್ಮ ಬನ್ನೆಟ್ಟಿ, ಬಾಬು ನೆಲ್ಲಗಿ, ಶಿವಾನಂದ ಪಾಟೀಲ, ಶಿವಪುತ್ರ, ದತ್ತಣ್ಣ ಕುಂಬಾರ, ಸಿದ್ದನಗೌಡ ಪಾಟೀಲ, ರಾಜು ಸಾಲೋಟಗಿ, ಶರಣಗೌಡ ಪಾಟೀಲ ಸೇರಿದಂತೆ ಅನೇಕರಿಗೆ ಸನ್ಮಾನಿಸಲಾಯಿತು.
ಸಹಕಾರಿ ಧುರೀಣರಾದ ಎಂ.ಎಸ್ ಪಾಟೀಲ, ಗೊಲ್ಲಾಳಪ್ಪಗೌಡ(ಗೋಲಗೇರಿ), ಎಂ.ಎ.ಖತೀಬ ಮಾತನಾಡಿದರು. ಈ ವೇಳೆ ಪಿಕಾರ್ಡ್ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಹಿರಿಯ ಸದಸ್ಯರಾದ ಡಿ.ಎಸ್ ಕಂಟಿಗೊಂಡ, ಜಿ.ಆರ್ ಪಾಟೀಲ, ಸುಮಿತ್ರಾ ಚಂದ್ರಶೇಖರ ದೇವರೆಡ್ಡಿ, ಬ್ಯಾಂಕ್ ಲೆಕ್ಕಾಧಿಕಾರಿ ಎಲ್.ಎಚ್ ಕುಲಕರ್ಣಿ, ಫೀಲ್ಡ್ ಆಫೀಸರ್ ಗಳಾದ ಎಂ.ಟಿ ವಂಕಲಕುಂಟಿ, ಆರ್.ಎಸ್ ನಾರಾಯಣಪುರ, ದ್ವಿತೀಯ ದರ್ಜೆ ಸಹಾಯಕಿ ಆರ್.ಎಂ ನದಾಫ್, ಪಿಗ್ನಿ ಸಂಗ್ರಹಕಾರ ಬಿ.ಬಿ ಅಡಗಲ್ಲ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಸದಸ್ಯರು ಭಾಗವಹಿಸಿದ್ದರು.