ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಜಿಲ್ಲೆಯ ಆಳಂದ ತಾಲೂಕಿನ ಕೆಲವೆಡೆ ಗುರುವಾರ ಭೂಕಂಪನವಾಗಿದೆ. ಆಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜವಳಗಾ ಗ್ರಾಮದ ಹತ್ತಿರ 2.3 ತೀವ್ರತೆಯ ಭೂಕಂಪನವಾಗಿದೆ. ಇದೆ ರೀತಿ ಸಿರಿಚಂದ ಗ್ರಾಮ ಪಂಚಾಯ್ತಿ, ಚಿಂಚನಸೂರು ಗ್ರಾಮ ಪಂಚಾಯ್ತಿ ಸೇರಿದಂತೆ ಹಲವು ಕಡೆ ಭೂಕಂಪನವಾಗಿದೆ. ಇದು ಲಘು ಭೂಕಂಪನವಾಗಿದೆ. ಇದಕ್ಕೆ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲವೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.