ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್(Hyderabad): ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ನಟ ಮಹೇಶ್ ಬಾಬುಗೆ ಇಡಿ ಸಮನ್ಸ್ ನೀಡಿದೆ. ಸ್ಥಳೀಯ ರಿಯಲ್ ಎಸ್ಟೇಟ್ ವಂಚನೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಏಪ್ರಿಲ್ 28ರಂದು ವಿಚಾರಣೆಗೆ ಬರಬೇಕು ಎಂದು ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ ಎಂದು ಮಂಗಳವಾರ ತಿಳಿಸಿದೆ.
ಇಲ್ಲಿ ನಟ ಮಹೇಶ್ ಬಾಬು ಅವರನ್ನು ಆರೋಪಿಯಾಗಿ ವಿಚಾರಣೆಗೆ ಕರೆಯುತ್ತಿಲ್ಲ. ವಂಚನೆ ನಡೆಸಿದ ಕಂಪನಿಯೊಂದಿಗೆ ಗೊತ್ತಿಲ್ಲದೆ ಸಂಬಂಧ ಹೊಂದಿರಬಹುದು. ಅವರ ಕಂಪನಿಯೊಂದಿಗೆ 5.9 ಕೋಟಿ ರೂಪಾಯಿ ವ್ಯವಹಾರವಿದೆ. ಹೀಗಾಗಿ ಈ ಬಗ್ಗೆ ಮಾಹಿತಿ ಪಡೆಯಲು ಅವರಿಗೆ ನೋಟಿಸ್ ನೀಡಲಾಗಿದೆ. ಇದು ಸಾಯಿ ಸೂರ್ಯ ಡೆವಲಪರ್ಸ್, ಸುರಾನಾ ಗ್ರೂಪ್ ಸೇರಿದಂತೆ ಇತರೆ ಹಲವು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಸಂಬಂಧಿಸಿದ ಪ್ರಕರಣವಾಗಿದೆ.