ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುರುಡೇಶ್ವರ ಸಮುದ್ರದಲ್ಲಿ ನಡೆದ ಘಟನೆ ಸಂಬಂಧ ಶೈಕ್ಷಣಿಕ ಪ್ರವಾಸ ರದ್ದುಗೊಳಿಸಲಾಗಿದೆ. ಈಗಾಗ್ಲೇ ಕೈಗೊಂಡವರು ವಾಪಸ್ ಕರೆದುಕೊಂಡು ಬರಬೇಕು ಎನ್ನುವ ನಿರ್ದೇಶನ ಶಿಕ್ಷಣ ಇಲಾಖೆ ನೀಡಿದೆ ಎಂದು ಗುರುವಾರ ಮಾಹಿತಿಯೊಂದು ಎಲ್ಲೆಡೆ ಹರಿದಾಡಿದೆ. ಇದು ಹಲವು ವೆಬ್ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ, ಈ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಶೈಕ್ಷಣಿಕ ಪ್ರವಾಸ ರದ್ದು ಮಾಡಿಲ್ಲ. ಈ ಬಗ್ಗೆ ಯಾವುದೇ ನಿರ್ದೇಶನ ನೀಡಿಲ್ಲವೆಂದು ತಿಳಿಸಲಾಗಿದೆ.
ಇನ್ನು ಶೈಕ್ಷಣಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಕೆಲವು ಜವಾಬ್ದಾರಿಗಳನ್ನು ಶಾಲೆಗಳಿಗೆ ನೀಡಲಾಗಿದೆ. ವ್ಯವಸ್ಥಿತವಾಗಿ ಯೋಜನೆಯನ್ನು ರೂಪಿಸಿಕೊಂಡು ಪ್ರವಾಸ ಕೈಗೊಳ್ಳಬೇಕು. ಮಕ್ಕಳನ್ನು ಅಪಾಯಕಾರಿ ಸ್ಥಗಳಿಗೆ ಕರೆದುಕೊಂಡು ಹೋಗಬಾರದು. ಪ್ರವಾಸದ ಉಸ್ತುವಾರಿ ವಹಿಸಿಕೊಂಡವರು ಎಲ್ಲ ಮಕ್ಕಳ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರವಾಸದ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಶಾಲೆಯ ಮುಖ್ಯಸ್ಥರು, ಉಸ್ತುವಾರಿ ವಹಿಸಿಕೊಂಡವರು ಅದರ ಜವಾಬ್ದಾರರು ಆಗಿರುತ್ತಾರೆ ಎಂದು ತಿಳಿಸಲಾಗಿದೆ.