Ad imageAd image

ಸಿಎಂ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ

ಇತ್ತೀಚೆಗೆ ಮುಗಿದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ(ಏಕನಾಥ್ ಶಿಂದೆ ಬಣ) ಭರ್ಜರಿ ಗೆಲುವು ಸಾಧಿಸಿದೆ.

Nagesh Talawar
ಸಿಎಂ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಇತ್ತೀಚೆಗೆ ಮುಗಿದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ(ಏಕನಾಥ್ ಶಿಂದೆ ಬಣ) ಭರ್ಜರಿ ಗೆಲುವು ಸಾಧಿಸಿದೆ. ವಿಪಕ್ಷಗಳನ್ನು ಧೂಳಿಪಟ ಮಾಡಿದೆ. ಈಗ ಹೊಸ ಸರ್ಕಾರ ರಚನೆಯ ಕಸರತ್ತು ನಡೆದಿದೆ. ಹೀಗಾಗಿ ಇಂದು ಏಕನಾಥ್ ಶಿಂದೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಮಂಗಳವಾರ ಮುಂಜಾನೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಸಲ್ಲಿಸಿದರು.

ಏಕನಾಥ್ ಶಿಂದೆ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ರಾಜಭವನ ತಿಳಿಸಿದೆ. ಬಿಜೆಪಿ-ಶಿವಸೇನೆ(ಏಕನಾಥ್ ಶಿಂದೆ ಬಣ) ದೊಡ್ಡ ಗೆಲುವು ಸಾಧಿಸಿದೆ. 288 ಸ್ಥಾನಗಳಲ್ಲಿ 235ರಲ್ಲಿ ಗೆದ್ದು ವಿಪಕ್ಷ ಸ್ಥಾನವನ್ನು ಇಲ್ಲದಂತೆ ಮಾಡಿದೆ. ಮುಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಎಂದು ಹೇಳಲಾಗುತ್ತಿದ್ದು, ಅಧಿಕೃತ ಘೋಷಣೆ ಬೇಕಿದೆ.

WhatsApp Group Join Now
Telegram Group Join Now
Share This Article