ಪ್ರಜಾಸ್ತ್ರ ಸುದ್ದಿ
ಅಮರಾವತಿ(Amaravati): ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರಕ್ಕೆ ಆಗಮಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಕೈಯಲ್ಲಿದ್ದ ಬ್ಯಾಗ್ ಅನ್ನು ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಧಮನ್ ಗಾಂವ್ ರೈಲು ನಿಲ್ದಾಣದಲ್ಲಿ ಲೋಕಸಭಾ ವಿಪಕ್ಷ ನಾಯಕನ ಬ್ಯಾಗ್ ಪರಿಶೀಲಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಲಿಕಾಪ್ಟರ್ ಮೂಲಕ ರೈಲು ನಿಲ್ದಾಣದ ಹತ್ತಿರ ನಿರ್ಮಿಸಿರುವ ಹೆಲಿಪ್ಯಾಡ್ ಗೆ ಬಂದರು. ಈ ವೇಳೆ ಅಲ್ಲಿಗೆ ಬಂದ ಚುನವಣಾಧಿಕಾರಿಗಳು ಅವರ ಬ್ಯಾಗ್ ಚೆಕ್ ಮಾಡಿದರು. ಶಿವಸೇನಾ(ಯುಬಿಟಿ) ನಾಯಕ, ಮಾಜಿ ಸಿಎಂ ಉದ್ಧವ್ ಠಾಕ್ರೆ ಯಾವತ್ ಮಾಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಅವರನ್ನು ಪರಿಶೀಲನೆ ನಡೆಸಲಾಗಿತ್ತು. ಆದರೆ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ಫಡ್ನಾವಿಸ್ ಅವರನ್ನು ಯಾಕೆ ಪರಿಶೀಲನೆ ಮಾಡಿಲ್ಲವೆಂದು ಕೈ ನಾಯಕರು ಕಿಡಿ ಕಾರಿದ್ದಾರೆ.