ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ನಡೆದಿರುವ ಚಾಕು ಇರಿತದ ಪ್ರಕರಣ ಸಂಬಂಧ ಪೊಲೀಸರು ಈಗಾಗ್ಲೇ ಸಿಸಿಟಿವಿಯಲ್ಲಿ ಸೆರೆಯಾದ ಆರೋಪಿಯ ಫೋಟೋ ಬಿಡುಗಡೆ ಮಾಡಿದೆ. ತನಿಖೆಯನ್ನು ಚುರುಕುಗೊಳಿಸಿದೆ. ಮನೆ ಕಳ್ಳತನ ಎಂದು ಹೇಳಲಾಗಿದ್ದ ಪ್ರಕರಣಕ್ಕೆ ಹಲವು ಟ್ವಿಸ್ಟ್ ಗಳಿದ್ದು, ತನಿಖಾ ತಂಡದಲ್ಲಿ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಎಂಟ್ರಿಯಾಗಿದೆ. ನಟ ಸೈಫ್ ಅಲಿಖಾನ್ ಮನೆ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಲೀಲಾವತಿ ಆಸ್ಪತ್ರೆಗೂ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಸಿವಿಲ್ ಡ್ರೆಸ್ ನಲ್ಲಿ ಖಡಕ್ ಆಗಿ ಎಂಟ್ರಿಕೊಟ್ಟಿರುವ ಹಿರಿಯ ಪೊಲೀಸ್ ಅಧಿಕಾರಿ ಆರೋಪಿಗಳ ಹೆಡೆಮುರಿ ಕಟ್ಟಿ ಇದರ ಹಿಂದಿನ ಸತ್ಯ ಏನು ಅನ್ನೋದು ಹೊರ ತರಲು ಹೊರಟಿದ್ದಾರೆ. ಸೈಫ್ ಅಲಿಖಾನ್ ಮನೆಯ ಕೆಲಸದಾಕೆಯ ಹೊಂದಿರುವ ಅಕ್ರಮ ಸಂಬಂಧದ ವಿಚಾರ ಬೆಳಕಿಗೆ ಬಂದಿದೆ. ಮನೆಗೆ ನುಗ್ಗಿದವರಲ್ಲಿ ಓರ್ವ ಆಕೆಗೆ ಪರಿಚಯವಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ ಗಂಗ್ ಸ್ಟರ್ ಬಿಷ್ಣೋಯಿ ಗ್ಯಾಂಗ್ ಇದರ ಹಿಂದೆ ಎನ್ನಲಾಗುತ್ತಿದೆ. ತನಿಖೆಯಿಂದ ಸತ್ಯ ಹೊರಬೇಕಿದೆ.