Ad imageAd image

ಕಣಿವೆ ನಾಡಿನಲ್ಲಿ ಉಗ್ರನ ಎನ್ ಕೌಂಟರ್

ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಿದ ಘಟನೆ ಜಮ್ಮು-ಕಾಶ್ಮೀರದ ದಾಚಿಗಂ ಅರಣ್ಯ ಪ್ರದೇಶದಲ್ಲಿ ನಡೆದಿದೆ.

Nagesh Talawar
ಕಣಿವೆ ನಾಡಿನಲ್ಲಿ ಉಗ್ರನ ಎನ್ ಕೌಂಟರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಶ್ರೀನಗರ(Srinagara): ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಿದ ಘಟನೆ ಜಮ್ಮು-ಕಾಶ್ಮೀರದ ದಾಚಿಗಂ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯನಡೆಸುತ್ತಿದ್ದ ಭದ್ರತಾ ಪಡೆ ಉಗ್ರರು ಅಡಗಿದ್ದ ಜಾಗವನ್ನು ಸುತ್ತುವರೆದರು. ಆಗ ಆ ಕಡೆಯಿಂದ ಗುಂಡಿನ ದಾಳಿ ನಡೆದಿದೆ. ಭದ್ರತಾ ಪಡೆಗಳು ಸಹ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ. ಗುಪ್ತಚರ ಮಾಹಿತಿ ನೀಡಿದ ಬಳಿಕ ಭದ್ರತಾ ಪಡೆ ಹಾಗೂ ಕಾಶ್ಮೀರದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

WhatsApp Group Join Now
Telegram Group Join Now
Share This Article