ಪ್ರಜಾಸ್ತ್ರ ಸುದ್ದಿ
ಮ್ಯಾಂಚೆಸ್ಟರ್(Manchester): ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಭಾರತ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ವಾಸಿಂಗ್ಟನ್ ಸುಂದರ್ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ತಾಳ್ಮೆಯ ಆಟದಿಂದ ತಂಡವನ್ನು ಸೋಲಿನಿಂದ ತಪ್ಪಿಸಿದ್ದಾರೆ. 2ನೇ ಇನ್ನಿಂಗ್ಸ್ ನಲ್ಲಿ ಭಾರತ 425ಕ್ಕೆ 4 ವಿಕೆಟ್ ಕಳೆದುಕೊಂಡು ಡ್ರಾನಲ್ಲಿ ಪಂದ್ಯ ಕೊನೆಗೊಂಡಿತು.
ಕನ್ನಡಿಗ ಕೆ.ಎಲ್ ರಾಹುಲ್ 90, ನಾಯಕ ಶುಭನಂ ಗಿಲ್ 103, ವಾಸಿಂಗ್ಟನ್ ಸುಂದರ್ ಅಜೇಯ 101 ಹಾಗೂ ಜಡೇಜಾ ಅಜೇಯ 107 ರನ್ ಗಳಿಂದಾಗಿ ಟೀಂ ಇಂಡಿಯಾವನ್ನು ಸೋಲಿಂದ ತಪ್ಪಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ 669 ರನ್ ಗಳನ್ನು ಇಂಗ್ಲೆಂಡ್ ಗಳಿಸಿತ್ತು. ಈ ಮೂಲಕ 311 ರನ್ ಗಳ ಲೀಡ್ ಸಾಧಿಸಿತ್ತು. ಇದನ್ನು ದಾಟಿ ದೊಡ್ಡ ಮೊತ್ತದ ಗುರಿಯನ್ನು ಭಾರತ ನೀಡಬೇಕಾಗಿತ್ತು. ಆದರೆ, ಇಂಗ್ಲೆಂಡ್ ಬೌಲಿಂಗ್ ಅನ್ನು ದಿಟ್ಟವಾಗಿ ಎದುರಿಸಿದ ಭಾರತದ ಪಡೆ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಇದರಿಂದಾಗಿ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1ರಿಂದ ಇಂಗ್ಲೆಂಡ್ ಮುನ್ನಡೆ ಕಾಯ್ದುಕೊಂಡಿದೆ.