ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಈ ಹಿಂದೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಿ ಎಂದಿದ್ದರು. ಇದಕ್ಕೆ ಸಾಕಷ್ಟು ವಿರೋಧದ ಮಾತುಗಳು ಕೇಳಿ ಬಂದವು. ಇದೀಗ ಎಲ್ ಅಂಡ್ ಟಿ ಕಂಪನಿ ಮುಖ್ಯಸ್ಥ ಎಸ್.ಎನ್ ಸುಬ್ರಹ್ಮಣ್ಯನ್, ಭಾನುವಾರದ ರಜೆಯನ್ನು ಸಹ ತ್ಯಜಿಸಿ. ಮನೆಯಲ್ಲಿ ಹೆಂಡ್ತಿ ಮುಖ ಎಷ್ಟು ಹೊತ್ತು ನೋಡ್ತೀರಾ. 90 ಗಂಟೆ ಕೆಲಸ ಮಾಡಿ ಎಂದಿದ್ದಾರೆ. ಇವರ ಹೇಳಿಕೆಯನ್ನು ಪತ್ರಕರ್ತೆ ಫಾಯೆ ಡಿಸೊಜಾ ತಮ್ಮ ಇನ್ಸಾಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮೆಂಟಲ್ ಹೆಲ್ತ್ ಮ್ಯಾಟರ್ಸ್ ಎಂದು ಬರೆದು, ಇಷ್ಟು ದೊಡ್ಡ ಸ್ಥಾನದಲ್ಲಿರುವವರ ಇಂತಹ ಹೇಳಿಕೆಗಳು ನಿಜಕ್ಕೂ ಅಚ್ಚರಿ ಎಂದಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇದನ್ನು ಖಂಡಿಸಿದ್ದಾರೆ. ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಇವರು ಇನ್ನಷ್ಟು ಕೆಟ್ಟದಾಗಿ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ನಾನು ಭಾನುವಾರವೂ ಕೆಲಸ ಮಾಡುತ್ತೇನೆ. ನೀವು ಕೆಲಸ ಮಾಡಿದರೆ ನಾನು ಹೆಚ್ಚು ಖುಷಿಯಾಗುತ್ತೇನೆ. ಭಾನುವಾರ ರಜೆ ಎಂದು ಎಷ್ಟು ಹೆಂಡ್ತಿ ಮುಖ ಗಂಡ, ಗಂಡನ ಮುಖ ಹೆಂಡ್ತಿ ನೋಡುತ್ತಾ ಕುಳಿತುಕೊಳ್ಳುವುದು. ಕಚೇರಿಗೆ ಬಂದು ಕೆಲಸ ಮಾಡಿ. ಚೀನಾದಲ್ಲಿ ಅತಿ ಹೆಚ್ಚು ಕೆಲಸ ಮಾಡುತ್ತಾರೆ. ಹೀಗಾಗಿ ಅವರು ಮುಂದೆ ಇದ್ದಾರೆ ಎಂದಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.