ಪ್ರಜಾಸ್ತ್ರ ಸುದ್ದಿ
ಟೀಂ ಇಂಡಿಯಾದ ಖ್ಯಾತ ಬೌಲರ್ ಯಜುವೇಂದ್ರ( Yuzvendra Chahal) ಚಹಲ್ ಪತ್ನಿ ಧನಶ್ರೀ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. 2020ರಲ್ಲಿ ಚಹಲ್ ಮದುವೆಯಾಗಿದ್ದಾರೆ. ಡ್ಯಾನ್ಸರ್, ಸೋಷಿಯಲ್ ಮೀಡಿಯಾ ಇನ್ ಫ್ಲುಯನ್ಸರ್ ಆಗಿದ್ದು, ಇನ್ಸ್ಟಾದಲ್ಲಿ 6.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪತಿ ಚಹಲ್ ಜೊತೆಗೆ ಆಗಾಗ ಡ್ಯಾನ್ಸ್ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಾರೆ.
ಇದೀಗ ಧನಶ್ರೀ(Dhanashree Verma) ತೆಲುಗಿನ ‘ಆಕಾಶಂ ದಾಟಿ ವಸ್ತಾವಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿದೆಯಂತೆ. ಶಶಿಕುಮಾರ್ ಮುತ್ತಲೂರಿ ನಿರ್ದೇಶನ, ದಿಲ್ ರಾಜು ನಿರ್ಮಾಣವಿದೆ. ರೊಮ್ಯಾಂಟಿಕ್ ಕಥೆಯನ್ನು ಈ ಚಿತ್ರ ಹೊಂದಿದೆ ಎನ್ನಲಾಗುತ್ತಿದ್ದು, ಧನಶ್ರೀ ಮೋಡಿ ಮಾಡುತ್ತಾರ ನೋಡಬೇಕು.