ಪ್ರಜಾಸ್ತ್ರ ಸುದ್ದಿ
ಯಲ್ಲಾಪುರ(Yallapura): ಎಥನಾಲ್ ಟ್ಯಾಂಕರ್ ಅಪಘಾತವಾಗಿ ಬೆಂಕಿ ಹೊತ್ತಿಕೊಂಡ ಘಟನೆ ತಾಲೂಕಿನ ಅರೆಬೈಲ್ ಘಟ್ಟದ ಹತ್ತಿರದ ಮಾರುತಿ ದೇವಸ್ಥಾನದ ಬಳಿ ಶನಿವಾರ ಬೆಳಗಿನಜಾವ ಸಂಭವಿಸಿದೆ. ಟ್ಯಾಂಕರ್ ಚಾಲಕ ದೂರ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾನೆ. ರಾಷ್ಟ್ರೀಯ ಹೆದ್ದಾರಿ 63ರ ತಿರುವಿನಲ್ಲಿ ಟ್ಯಾಂಕರ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಟ್ಯಾಂಕರ್ ಪಲ್ಟಿಯಾದ ರಭಸಕ್ಕೆ ಟ್ಯಾಂಕ್ ಗೆ ಹಾನಿಯಾಗಿದೆ. ಇದರಿಂದಾಗಿ ಬೆಂಕಿ ಹತ್ತಿದ್ದು ತೀವ್ರವಾಗಿ ವ್ಯಾಪಿಸಿದೆ. ಹೀಗಾಗಿ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯಿಂದ ಕೇರಳಕ್ಕೆ ಎಥಿನಾಲ್ ಸಾಗಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.




