ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದಲ್ಲಿ ಕೆಎಸ್ಆರ್ ಟಿಸಿ(KSRTC) ಬಸ್ ಟಿಕೆಟ್ ದರದಲ್ಲಿ ಶೇಕಡ 15ರಷ್ಟು ಏರಿಕೆ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಇದರ ವಿರುದ್ಧ ಸಾರ್ವಜನಿಕರು, ವಿಪಕ್ಷಗಳು ಗರಂ ಆಗಿವೆ. ಈ ಬಗ್ಗೆ ಮಾತನಾಡಿರುವ ಸಚಿವ( Cheluvarayaswamy) ಚಲುವರಾಯಸ್ವಾಮಿ, ಬಸ್ ಟಿಕೆಟ್ ದರ ಏರಿಕೆ ಮಾಡಿ 10 ವರ್ಷವಾಗಿದೆ. ಮಟನ್ ದರ ಹೆಚ್ಚಿಗೆಯಾದರೂ ತಿಂತಿರಾ. ಆದರೆ, ಬಸ್ ದರ ಹೆಚ್ಚಿಗೆ ಆದರೆ ತಗೊಳ್ಳೋಕೆ ಆಗಲ್ವಾ ಎಂದು ಪ್ರಶ್ನಿಸುವ ಮೂಲಕ ಸಂಬಂಧವೇ ಇಲ್ಲದ ಹೋಲಿಕೆ ಮೂಲಕ ಸಮರ್ಥನೆ ಮಾಡಿಕೊಂಡಿದ್ದಾರೆ.
ಸೆವನ್ ಪೇ ಕಮಿಷನ್ ಆಗಿದೆ. ನೌಕರರಿಗೆ ಹೆಚ್ಚಿನ ವೇತನ ಕೊಡಬೇಕು. ಎರಡ್ಮೂರು ವರ್ಷಕ್ಕೆ ದರ ಪರಿಷ್ಕರಣೆ ಮಾಡಬೇಕು. ಇದರಿಂದ ಸಮಸ್ಯೆಯಾಗಲ್ಲ. ಕಳೆದ 10-15 ವರ್ಷದಿಂದ ಪರಿಷ್ಕರಣೆ ಆಗಿಲ್ಲ. ಆಂಧ್ರಾ, ತಮಿಳುನಾಡು, ಕೇರಳದಲ್ಲಿ ನಮ್ಮಲ್ಲಿಕ್ಕಿಂತ ಟಿಕೆಟ್ ದರ ಹೆಚ್ಚಿಗೆ ಇದೆ. ಅದನ್ನು ತೋರಿಸಿ ಎಂದು ಮಾಧ್ಯಮದವರಿಗೆ ಹೇಳಿದರು. ಸಚಿವರ ಮಾತಿಗೆ ಮಟನ್ ತಿನ್ನುವವರು ಮಾತ್ರ ಬಸ್ಸಿನಲ್ಲಿ ಪ್ರಯಾಣ ಮಾಡ್ತಾರ ಎಂದು ಕೇಳುತ್ತಿದ್ದಾರೆ. ಮತ್ತೊಂದು ರಾಜ್ಯದಲ್ಲಿ ಹೆಚ್ಚಿಗೆ ಇದೆ ಎಂದು ನಮ್ಮಲ್ಲಿ ಮಾಡಬಾರದು. ನಮ್ಮ ಜನರ ಜೀವನ ಸುಧಾರಿಸುವ ಕೆಲಸ ಮಾಡಬೇಕು ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.