Ad imageAd image

ಪ್ರತಿ ವರ್ಷ ದಸರಾ ಕವಿಗೋಷ್ಠಿ ಗೋಳು!

ಮೈಸೂರು ದಸರಾ ಸಂದರ್ಭದಲ್ಲಿ ನಡೆಸುವ ಕವಿಗೋಷ್ಠಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತೆ. ಈ ವರ್ಷವೂ ಮತ್ತೆ ಅದೆ ಮಾತುಗಳು ಕೇಳಿ ಬರುತ್ತಿವೆ.

Nagesh Talawar
ಪ್ರತಿ ವರ್ಷ ದಸರಾ ಕವಿಗೋಷ್ಠಿ ಗೋಳು!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಮೈಸೂರು ದಸರಾ ಸಂದರ್ಭದಲ್ಲಿ ನಡೆಸುವ ಕವಿಗೋಷ್ಠಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತೆ. ಈ ವರ್ಷವೂ ಮತ್ತೆ ಅದೆ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲಿ ಬಹುಮುಖ್ಯವಾಗಿ ಅವಕಾಶ ಕೊಟ್ಟವರಿಗೆ ಪದೆಪದೆ ಕೊಡುವುದು ಎನ್ನುವುದು. ಒಮ್ಮೆ ಕವಿತೆ ವಾಚಿಸುತ್ತಾರೆ. ಮತ್ತೊಂದು ದಸರಾದಲ್ಲಿ ಉದ್ಘಾಟಕರಾಗುತ್ತಾರೆ. ಇನ್ನೊಂದು ದಸರಾದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿರುತ್ತಾರೆ. ಯುವ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದವರು, ಮತ್ತೊಂದು ಸಾರಿ ಸಮೃದ್ಧ ಕವಿಗೋಷ್ಠಿಯಲ್ಲಿಯೂ ಇರುತ್ತಾರೆ. ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಉಳಿದವರು ಕೇಳುತ್ತಾರೆ. ಕೆಲವರು ನಾವು ಕವಿಗೋಷ್ಠಿಯಿಂದ ದೂರು ಉಳಿಯುತ್ತೇವೆ ಎನ್ನುತ್ತಾರೆ. ಆದರೆ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಎಷ್ಟು ಕವಿಗಳಿಗೆ ಪ್ರತಿವರ್ಷ ಅವಕಾಶ ಸಿಗುತ್ತಿದೆ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

ಪ್ರತಿ ದಸರಾ ಕವಿಗೋಷ್ಠಿಯಲ್ಲಿ ಕೇಳಿ ಬಂದಿರುವ ಹೆಸರುಗಳೇ ಇರುತ್ತೆ. ಹೆಚ್ಚಾಗಿ ಬೆಂಗಳೂರು, ಮೈಸೂರು, ಹಳೆ ಮೈಸೂರು ಭಾಗ, ದಕ್ಷಿಣ ಕನ್ನಡ ಸೇರಿದಂತೆ ಆ ಭಾಗದವರೆ ತುಂಬಿ ತುಳುಕುತ್ತಾರೆ. ಜೊತೆಗೆ ಇವರೆಲ್ಲ ಆಗಾಗ ಬೇರೆ ಬೇರೆ ವೇದಿಕೆ ಮೂಲಕ ನಡೆಯುವ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ ಇಲ್ಲವೇ ಅವರದೆ ತಂಡ ಕಟ್ಟಿಕೊಂಡು ತಮಗೆ ತಾವೇ ಜೈಕಾರ ಹಾಕಿಕೊಳ್ಳುತ್ತಾರೆ ಎನ್ನುವ ಅಪಸ್ವರ ಸಹ ಕೇಳಿ ಬರುತ್ತೆ. ಅದು ಅಲ್ಲದೆ ಬಹುತೇಕರು ಪದವಿ ಕಾಲೇಜು, ಪಿಯು ಕಾಲೇಜು, ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡುವ ಬಳಗವೇ ಹೆಚ್ಚು. ಬೇರೆ ಬೇರೆ ಕ್ಷೇತ್ರದಲ್ಲಿರುವ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗದಲ್ಲಿರುವ ಭರವಸೆಯ ಕವಿಗಳನ್ನು, ಲೇಖಕರನ್ನು ಗುರುತಿಸುವ ಕೆಲಸ ಇರಲಿ ಅವರ ಕೃತಿಗಳ ಕುರಿತು ಸೊಲ್ಲೆತ್ತುವುದಿಲ್ಲ ಎನ್ನುವ ಆಕ್ರೋಶ ಸಹ ಈ ಭಾಗದ ಯುವ ಬರಹಗಾರರದ್ದಾಗಿದೆ. ಸರ್ಕಾರಗಳು ಬದಲಾದಂತೆ ಸಾಹಿತ್ಯ, ಸಾಂಸ್ಕೃತಿಕಕ್ಕೆ ಸಂಬಂಧಿಸಿದ ಹುದ್ದೆಗಳಿಗೆ ಆಯಾ ಕಟ್ಟಿನ ಜನರೆ ತುಂಬಿಕೊಳ್ಳುತ್ತಾರೆ. ಅವರಿಗವರೆ ಪ್ರಶಸ್ತಿ, ಅವಕಾಶಗಳನ್ನು ಕೊಡುತ್ತಾ ಹೋಗುತ್ತಾರೆ. ಹೀಗಾಗಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿರುವುದು ಮಾತ್ರ ಸತ್ಯ.

WhatsApp Group Join Now
Telegram Group Join Now
Share This Article