ಪ್ರಜಾಸ್ತ್ರ ಸುದ್ದಿ
ಇಂದೋರ್(Indore): ವಿದ್ಯುತ್ ಚಾರ್ಜಿಂಗ್ ಕಾರ್ ಪಾಯಿಂಟ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ 8 ಜನರು ಮೃತಪಟ್ಟಿದ್ದಾರೆ. ಒಂದೇ ಕುಟುಂಬದ 8 ಜನರು ಸಜೀವ ದಹನವಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ಈ ದುರಂತ ಬುಧವಾರ ನಸುಕಿನ ಜಾವ ಸಂಭವಿಸಿದೆ. ಬ್ರಜೇಶ್ವರಿ ಅನೆಕ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸೇರಿ 8 ಜನರು ಮೃತಪಟ್ಟಿದ್ದಾರೆ.
ಮೂರು ಅಂತಸ್ತಿನ ಮನೆಯ ಮುಂದೆ ಕಾರು ಚಾರ್ಜ್ ಗೆ ಇಡಲಾಗಿತ್ತು. ಈ ವೇಳೆ ಸ್ಫೋಟಗೊಂಡಿದೆ. ಇದರಿಂದಾಗಿ ಬೆಂಕಿ ಮನೆಯ ತುಂಬಾ ಆವರಿಸಿಕೊಂಡಿದೆ. ಇದರ ಜೊತೆಗೆ ಮನೆಯೊಳಗಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಹೀಗಾಗಿ ಬೆಂಕಿ ಮತ್ತಷ್ಟು ವ್ಯಾಪಿಸಿಕೊಂಡಿದೆ. ಮನೆಯ ಬಾಗಿಲು ಲಾಕ್ ಆಗಿದ್ದರಿಂದ ಪೊಲೀಸರು ಒಳಗೆ ಪ್ರವೇಶಿಸಲು ಕಷ್ಟವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.




