Ad imageAd image

ಮಾಜಿ ಸಚಿವ ಸಿದ್ದೀಕಿ ಹತ್ಯೆ ಪ್ರೀಪ್ಲಾನ್, ರಾಹುಲ್ ಗಾಂಧಿ ಕಿಡಿ

ಬಾಂದ್ರಾದ್ ನಿರ್ಮಲ ನಗರದಲ್ಲಿ ಶನಿವಾರ ರಾತ್ರಿ ಎನ್ ಸಿಪಿ(ಅಜಿತ್ ಪವಾರ್ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ(66) ಅವರನ್ನು ಹತ್ಯೆ ಮಾಡಲಾಗಿದೆ.

Nagesh Talawar
ಮಾಜಿ ಸಚಿವ ಸಿದ್ದೀಕಿ ಹತ್ಯೆ ಪ್ರೀಪ್ಲಾನ್, ರಾಹುಲ್ ಗಾಂಧಿ ಕಿಡಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಬಾಂದ್ರಾದ್ ನಿರ್ಮಲ ನಗರದಲ್ಲಿ ಶನಿವಾರ ರಾತ್ರಿ(NCP) ಎನ್ ಸಿಪಿ(ಅಜಿತ್ ಪವಾರ್ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ(66) ಅವರನ್ನು ಹತ್ಯೆ ಮಾಡಲಾಗಿದೆ. ಇದೊಂದು ಪೂರ್ವನಿಯೋಜಿತ ಕೃತ್ಯವೆಂದು ಪೊಲೀಸರು ಹೇಳುತ್ತಿದ್ದಾರೆ. ವೃತ್ತಿ ವೈಷಮ್ಯದಿಂದ ಕೊಲೆ ನಡೆದಿರುವ ಶಂಕೆಯಿದೆ. ಇದಕ್ಕಾಗಿ ಸುಫಾರಿ ಕೊಟ್ಟಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಮುಂಬೈ ಕ್ರೈಂ(Crime Branch Police) ಬ್ರ್ಯಾಂಚ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊಲೆಗೂ ಮೊದಲು ಸಿದ್ಧೀಕಿ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವಂತೆ. ಇದನ್ನು ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ವೈ ಮಾದರಿಯ ಭದ್ರತೆಯ ಜೊತೆಗೆ ಖಾಸಗಿ ಭದ್ರತಾ ಪಡೆ ಸಹ ಹೊಂದಿದ್ದರು. ನವರಾತ್ರಿ ಹಬ್ಬದ ಪ್ರಯುಕ್ತ ಮಗ, ಶಾಸಕ ಜಿಶಾನ್ ಸಿದ್ಧೀಕಿ ಮನೆಗೆ ಹೋಗಿದ್ದರು. ಮನೆಯಿಂದ ರಾತ್ರಿ ಸುಮಾರು 9.30ರ ಹೊತ್ತಿಗೆ ಹೊರಗೆ ಬರುತ್ತಿದ್ದಾಗ ಬೈಕ್ ನಲ್ಲಿ ಬಂದ ಮೂವರು ಇವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ದುಷ್ಕರ್ಮಿಗಳು ಹಾರಿಸಿದ ಗುಂಡು ಎದೆ, ಹೊಟ್ಟೆಗೆ ಬಡೆದಿದೆ. ಅವರನ್ನು ಕೂಡಲೇ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ರಾತ್ರಿ 12.30ರ ಸುಮಾರಿಗೆ ಮೃತಪಟ್ಟಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಇನ್ನೊಬ್ಬನ ಹುಡುಕಾಟ ನಡೆದಿದೆ. ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಶಾಸಕರಾಗಿದ್ದರು. ಕಳೆದ ಫೆಬ್ರವರಿಯಲ್ಲಿ ಅಜಿತ್ ಪವಾರ್ ಬಣದ ಎನ್ ಸಿಪಿ ಸೇರಿದ್ದರು. ಇವರು ಮೂಲತಃ ಬಿಹಾರದವರು.

ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ:

ಈ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಸಂಸದ ರಾಹುಲ್(Rahul Gandhi) ಗಾಂಧಿ, ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಘಟನೆಯ ಹೊಣೆಯನ್ನು ಸರ್ಕಾರ ಹೊತ್ತುಕೊಳ್ಳಬೇಕು. ಸಿದ್ದೀಕಿ ಅವರ ಸಾವು ಆಘಾತ ಮೂಡಿಸಿದೆ. ಅವರ ಕುಟುಂಬದೊಂದಿಗೆ ನಾವು ಇರುತ್ತೇವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article