ಪ್ರಜಾಸ್ತ್ರ ಸುದ್ದಿ
ಶ್ರೀನಗರ(Srinagara): ಫರೀದಾಬಾದ್ ನಲ್ಲಿ ಇತ್ತೀಚೆಗೆ ಶಂಕಿತ ಉಗ್ರ ಡಾ.ಮುಜಮ್ಮಿಲ್ ಗನಿ ಮನೆಯಲ್ಲಿ 360 ಕೆಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ನಗೌಮ್ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ಸಂಗ್ರಹದಿಂದ ಮಾದರಿಯನ್ನು ಹೊರ ತೆಗೆಯುವ ವೇಳೆ ಸ್ಫೋಟ ಸಂಭವಿಸಿ 9 ಪೊಲೀಸರು ಮೃತಪಟ್ಟಿದ್ದಾರೆ. 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸ್ಫೋಟದ ತೀವ್ರದಿಂದಾಗಿ ಮೃತದೇಹಗಳು ಗುರುತು ಸಿಗದಂತಾಗಿವೆ. ಶ್ರೀನಗರದಲ್ಲಿರುವ ಪೊಲೀಸ್ ಕಂಟ್ರೋಲ್ ರೂಮಿಗೆ ರವಾನಿಸಲಾಗಿದೆ. ಈ ಘಟನೆಯಲ್ಲಿ 24 ಪೊಲೀಸರು, ಮೂವರು ಸಾರ್ವಜನಿಕರು ಗಾಯಗೊಂಡಿದ್ದಾರೆ.




