Ad imageAd image

ಎರಡು ರೈಲು ಹಳಿ ತಪ್ಪಿಸುವ ಯತ್ನ ವಿಫಲ

Nagesh Talawar
ಎರಡು ರೈಲು ಹಳಿ ತಪ್ಪಿಸುವ ಯತ್ನ ವಿಫಲ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹರ್ದೋಯ್(Hardoi): ಎರಡು ರೈಲುಗಳನ್ನು ಹಳಿ ತಪ್ಪಿಸುವ ದುಷ್ಕೃತ್ಯವನ್ನು ವಿಫಲಗೊಳಿಸಲಾಗಿದೆ. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಲೋಕೊ ಪೈಲಟ್ ಗಳ ಜಾಗೃತಿಯಿಂದ ಅನಾಹುತ ತಪ್ಪಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಲಖನೌ ಕಡೆ ಹೊರಟಿದ್ದ ರಾಜಧಾನಿ ಎಕ್ಸ್ ಪ್ರೆಸ್ ನ ಲೋಕೊ ಪೈಲಟ್ ಸಮಸ್ಯೆಯನ್ನು ಗಮನಿಸಿ ತುರ್ತು ಬ್ರೇಕ್ ಹಾಕಿದರು. ಮರದ ದಿಮ್ಮಿ ಇಡಲಾಗಿತ್ತು. ಇನ್ನೊಂದು ಕಡೆ ದಲೇಲ್ ನಗರ ಹಾಗೂ ಉಮರ್ತಾಲಿ ಮಧ್ಯ ಮಾರ್ಕರ್ 1129/14ರ ಹತ್ತಿರ ಸಹ ಇದೇ ಮರದ ದಿಮ್ಮಿ ಕಟ್ಟಲಾಗಿತ್ತು. ಸೋಮವಾರ ಸಂಜೆ ಈ ಘಟನೆ ನಡೆದಿದೆ. ರೈಲ್ವೆ ಪೊಲೀಸರು, ರಕ್ಷಣಾ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ಮಂಗಳವಾರ ತಿಳಿಸಲಾಗಿದೆ.

WhatsApp Group Join Now
Telegram Group Join Now
Share This Article