ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್(Hyderabad): ತೆಲುಗು ಸಿನಿ ಜಗತ್ತಿನ ಖ್ಯಾತ ನಟರಾದ ಮೋಹನ್ ಬಾಬು ಹಾಗೂ ಅವರ ಪುತ್ರ ಮಂಚು ಮನೋಜ್ ನಡುವಿನ ಜಗಳ ಇದೀಗ ಬೀದಿಗೆ ಬಂದಿದೆ. ತಂದೆ, ಮಗ ಇಬ್ಬರು ಪೊಲೀಸ್ ಠಾಣೆಯಲ್ಲಿ ಒಬ್ಬರಿಗೊಬ್ಬರು ದೂರು ದಾಖಲಿಸಿದ್ದಾರೆ. ಕಳೆದ ಎರಡು ದಿನಗಳಿಂದ ಇವರು ಗಲಾಟೆ ಸಾಕಷ್ಟು ಚರ್ಚೆಗಾಗಿ ಕಾರಣವಾಗಿದ್ದು, ಕಳೆದ ರಾತ್ರಿ ಅದು ತಾರಕಕ್ಕೆ ಹೋಗಿದೆ ಎಂದು ತಿಳಿದು ಬಂದಿದೆ.
ಹಿರಿಯ ನಟ ಮೋಹನ್ ಬಾಬುಗೆ ವಿಷ್ಣು, ಮನೋಜ್ ಹಾಗೂ ಲಕ್ಷ್ಮಿ ಎನ್ನುವ ಮೂವರು ಮಕ್ಕಳು. ಇವರೆಲ್ಲರು ಸಹ ಸಿನಿರಂಗದಲ್ಲಿ ಇದ್ದಾರೆ. ಮನೋಜ್ ತಂದೆ ಹಾಗೂ ಸಹೋದರನಿಂದ ದೂರು ಇದ್ದಾನೆ. ಕಳೆದ ವರ್ಷ ಇವರು 2ನೇ ಮದುವೆಯಾಗಿದ್ದು, ಇದಕ್ಕೆ ಒಲ್ಲದ ಮನಸ್ಸಿನಿಂದ ಮನೆಯವರು ಒಪ್ಪಿಕೊಂಡಿದ್ದಾರಂತೆ. ಆದರೆ, ಮುಂದೆ ಇವರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ನಟ, ಖಳನಟರಾಗಿ ನಟಿಸುತ್ತಿರುವ ಮೋಹನ್ ಬಾಬು ಸಾಕಷ್ಟು ಆಸ್ತಿ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಸಹ ಕಟ್ಟಿದ್ದಾರೆ. ಈ ಆಸ್ತಿಯ ವಿಚಾರವಾಗಿಯೇ ತಂದೆ, ಮಗನ ನಡುವೆ ಜಗಳ ನಡೆಯುತ್ತಿದೆಯಂತೆ.
ಮನೋಜ್ ಮಗು ಅಜ್ಜನ ಬಳಿಯಿದೆಯಂತೆ. ಮಗುವನ್ನು ಬೇಕಿದ್ದರೆ ಕರೆದುಕೊಂಡು ಹೋಗು. ಇಲ್ಲವಾದರೆ ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಮೋಹನ್ ಬಾಬು ಹೇಳಿದ್ದಾರಂತೆ. ಅಲ್ಲದೇ ಆಸ್ತಿ ನನ್ನ ಸ್ವಯಾರ್ಜಿತ. ನಾನು ಕೊಟ್ಟರೆ ನೀನು ತಗೋಬೇಕು. ಇದರಲ್ಲಿ ಕೇಳುವ ಹಕ್ಕು ನೀನಗಿಲ್ಲ ಎಂದು ಮಗನ ಬಗ್ಗೆ ಬೇರೆಯೊಬ್ಬರು ಬಳಿ ಹೇಳಿರುವ ಆಡಿಯೋ ಕ್ಲಿಪ್ ಸಿಕ್ಕಿದೆಯಂತೆ. ಅಲ್ಲದೆ ಒಬ್ಬರಿಗೊಬ್ಬರು ತಮ್ಮ ಮೇಲೆ ಬೌನ್ಸರ್ ಗಳಿಂದ ಹಲ್ಲೆ ಮಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಸ್ತಿಗಾಗಿ ಖ್ಯಾತ ಕಲಾವಿದರ ಕುಟುಂಬ ಈ ಹಂತಕ್ಕೆ ಹೋಗಿದ್ದು ಎಲ್ಲರೂ ಆಡಿಕೊಳ್ಳುವಂತಾಗಿದೆ.