ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandya): ಹೊಲದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ರೈತ ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಹತ್ತಿರದ ಸಾಗ್ಯ ಗ್ರಾಮದಲ್ಲಿ ನಡೆದಿದೆ. ರಮೇಶ್(38) ಅನ್ನೋ ರೈತ ಮೃತಪಟ್ಟಿದ್ದಾನೆ. ತೆಂಗಿನ ಗರಿಗಳನ್ನು ಹೊಲದಿಂದ ಆಚೆ ಹಾಕುವಾಗ ವಿದ್ಯುತ್ ತಗುಲಿ ಈ ಅವಗಡ ಸಂಭವಿಸಿದೆ.
ನಿತ್ಯ ಹೋಗುವಂತೆ ಮಂಗಳವಾರ ಮುಂಜಾನೆ ಹೊಲಕ್ಕೆ ಹೋಗಿದ್ದಾರೆ. ತೆಂಗಿನ ಗರಿಗಳನ್ನು ತೆಗೆದು ಹಾಕುವ ಸಂದರ್ಭದಲ್ಲಿ 11 ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.



		
		
		
 
 