ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): 2025-26ನೇ ಸಾಲಿನ ಬಜೆಟ್(Budget) ಪೂರ್ವಭಾವಿ ಸಭೆಯನ್ನು ರೈತ ಮುಖಂಡರೊಂದಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ನಡೆಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಇದಕ್ಕೂ ಮೊದಲು ರೈತ ಮುಖಂಡರು ತಮ್ಮ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ರೈತರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇವೆ. ರೈತರ ಬೇಡಿಕೆ ನಮ್ಮ ಪ್ರಥಮ ಆದ್ಯತೆ ಎಂದರು.
ಅತಿ ಹೆಚ್ಚು ಉದ್ಯೋಗ ಅವಲಂಬನೆ ಇರುವುದು ಕೃಷಿಯಲ್ಲಿ. ಹೀಗಾಗಿ ಇಂದು ನಡೆದ ಸಭೆಯಲ್ಲಿ ಅವರ ರೈತರ(Farmers) ಕುಂದು ಕೊರತೆಗಳನ್ನು, ಬೇಡಿಕೆಗಳನ್ನು ಕೇಳಿದ್ದೇನೆ ಎಂದರು. ನೀರಾವರಿ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಡಲು ಸಿದ್ಧ ಎಂದಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ(HDD) ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಇದು ನನ್ನ ಅಭಿಪ್ರಾಯ ಸಹವಾಗಿದೆ. ನಾಡಿನ ನೆಲ, ಜಲ ವಿಚಾರ ಬಂದಾಗ ನಾನು ಕನ್ನಡಿಗನಾಗಿ ಹೋರಾಡಿದ್ದೇನೆ. ರಾಜಕಾರಣಿಯಾಗಿ ನಡೆದುಕೊಂಡಿಲ್ಲ ಎನ್ನವುದನ್ನು ಅವರ ಗಮನಕ್ಕೆ ತರಲು ಬಯಸುತ್ತೇನೆ ಅಂತಾ ಹೇಳಿದರು.