ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ದನದ ಕೊಟ್ಟಿಗೆಯಲ್ಲಿ ಖೋಟಾ ನೋಟ್ ಪ್ರಿಂಟ್ ಮಾಡುತ್ತಿದ್ದ ತಂದೆ ಹಾಗೂ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಟಿ.ನರಸೀಪುರ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ತಂದೆ ಶಿವಪ್ರಸಾದ್(48) ಹಾಗೂ ಮಗ ನಾಗೇಶ್(25) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ತಂದೆ, ಮಗ ಸೇರಿಕೊಂಡು ಅನಾಹುತ ಕೆಲಸಕ್ಕೆ ಕೈ ಹಾಕಿದ್ದರು. ಖೋಟಾ ನೋಟ್ ಪ್ರಿಂಟ್ ಮಾಡಲು ಬಳಸುತ್ತಿದ್ದ ಕಪ್ಪು ಬಣ್ಣದ ಎಪ್ಸನ್ ಪ್ರಿಂಟರ್, ಪೇಪರ್ ಮೇಜರ್ ಮೆಂಟ್ ಕಟ್ಟಿಂಗ್ ಸ್ಕೇಲ್, ಗಾಂಧಿ ಫೋಟೋದ ವಾಟರ್ ಮಾರ್ಕ್ ಇರುವ ಹಾಗೂ ನೋಟಿನ ಗೆರೆಯುಳ್ಳ ಬಿಳಿ ಬಣ್ಣದ ಹಾಳೆ, 3 ಕಲರ್ ಇಂಕ್ ಬಾಟಲ್ ಗಳು, ಎ4 ಸೈಜಿನ ಬಿಳಿ ಹಾಳೆಗಳು, 2 ಮೊಬೈಲ್, 16 ಜಿಬಿ ಪೆನ್ ಡ್ರೈವ್, ಅಡಾಪ್ಟರ್, ಎಟಿಎಂ ಕಾರ್ಡ್ ಸೇರಿ ಹಲವು ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.