ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಘಟಪ್ರಭಾ ಹಿನ್ನೀರಿನ ನದಿಯಲ್ಲಿ ಮೀನು ಹಿಡಿಯಲು ಹೋದ ತಂದೆ ಹಾಗೂ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ ಜಿಲ್ಲೆಯ ಯಮಕನಮರಡಿಯ ಬೆನಕನಹೊಳಿಯಲ್ಲಿ ನಡೆದಿದೆ. ಅವರ ಪತ್ತೆಕಾರ್ಯ ನಡೆದಿದೆ. ಲಕ್ಷ್ಮ್ಣ ಅಂಬಲಿ(45), ಮಕ್ಕಳಾದ ಯಲ್ಲಪ್ಪ(13), ರಮೇಶ(15) ಮೃತ ದುರ್ದೈವಿಗಳು. ಭಾನುವಾರ ಸಂಜೆ ಮೀನು ಹಿಡಿಯಲು ಬಂದವರು ಇದುವರೆಗೂ ಪತ್ತೆಯಾಗಿಲ್ಲ.
ಕುಟುಂಬಸ್ಥರ ಸೋಮವಾರ ಮುಂಜಾನವರೆಗೂ ಹುಡುಕಾಟ ನಡೆಸಿದ್ದಾರೆ. ಅವರು ಮನೆಗೂ ಸಹ ವಾಪಸ್ ಬಂದಿಲ್ಲ. ಹೀಗಾಗಿ ಯಮಕನಮರಡಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ, ಎನ್ ಡಿಆರ್ ಎಫ್ ತಂಡ ಘಟಪ್ರಭಾ ಹಿನ್ನೀರಿನ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.