ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ಮಗಳನ್ನು ತಂದೆಯ ಹತ್ಯೆ ಮಾಡಿದ ಘಟನೆ ನಗರದಲ್ಲಿ ಭಾನುವಾರ ಸಂಜೆ ನಡೆದಿದೆ. ಮಾನ್ಯ ಅನ್ನೋ ಯುವತಿ ಮೃತಪಟ್ಟಿದ್ದಾಳೆ. ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಪ್ರಕಾಶಗೌಡ ಪಾಟೀಲ, ವೀರನಗೌಡ ಪಾಟೀಲ, ಅರುಣಗೌಡ ಪಾಟೀಲ ಬಂಧಿತ ಆರೋಪಿಗಳು.
ಇನಾಂ ವೀರಾಪುರ ಗ್ರಾಮದ ಮೃತ ಮಾನ್ಯ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಅದೇ ಗ್ರಾಮದ ವಿವೇಕಾನಂದ ದಲಿತ ಸಮುದಾಯದ ಯುವಕನಾಗಿದ್ದಾನೆ. ಇವರಿಬ್ಬರು ಬೇರೆ ಬೇರೆ ಕಾಲೇಜಿನಲ್ಲಿ ಪದವಿ ಓದಿದ್ದು, ಕೋಚಿಂಗ್ ಸಂದರ್ಭದಲ್ಲಿ ಪರಿಚಯವಾಗಿದ್ದರು. ಪ್ರೀತಿಸಿ, ರಿಜಿಸ್ಟರ್ ಮದುವೆ ಸಹ ಮಾಡಿಕೊಂಡಿದ್ದರು. ಈ ಸಂಬಂಧ ಈ ಹಿಂದೆ ಗಲಾಟೆಯಾಗಿ, ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತ್ತು. ಆಗ ರಾಜಿ ಸಂಧಾನ ಮಾಡಲಾಗಿತ್ತು. ಹೀಗಾಗಿ ಈ ಜೋಡಿ ಹಾವೇರಿಗೆ ಹೋಗಿ ನೆಲಿಸಿತ್ತು.
ಯುವತಿ ಈಗ 7 ತಿಂಗಳ ಗರ್ಭಿಣಿ ಇದ್ದಳು. ಪರಿಸ್ಥಿತಿ ಸರಿ ಹೋಗಿರಬಹುದು ಎಂದು ಡಿಸೆಂಬರ್ 8ರಂದು ಸ್ವಗ್ರಾಮಕ್ಕೆ ಬಂದಿದ್ದಾರೆ. ಆದರೆ, ಮತ್ತೆ ಗಲಾಟೆಯಾಗಿದೆ. ಪೊಲೀಸರು ಪುನಃ ರಾಜಿ ಸಂಧಾನ ಮಾಡಿ ಕಳಿಸಿದ್ದರು. ಆದರೆ, ನಿನ್ನೆ ಸಂಜೆ ಯುವತಿ ಮಾನ್ಯ ತಂದೆ ಪ್ರಕಾಶಗೌಡ ಪಾಟೀಲ ಸಂಬಂಧಿಕರ ಜೊತೆ ಸೇರಿಕೊಂಡು ವಿವೇಕಾನಂದ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಯಲ್ಲಿದ್ದ ಮಾನ್ಯ, ಅತ್ತೆ ಸೇರಿ ಮೂವರ ಮೇಲೆ ಗುದ್ದಲಿ, ಪೈಪ್ ನಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಮಾನ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಆಕೆಯ ಅತ್ತೆ ಸೇರಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.




