Ad imageAd image

ಕಲಬುರಗಿ: ಮಗನನ್ನು ಕೊಂದ ತಂದೆಗೆ ಜೀವಾವಧಿ ಶಿಕ್ಷೆ

ಚಾಕುವಿನಿಂದ ಮಗನಿಗೆ ಚುಚ್ಚಿ ಕೊಲೆ ಮಾಡಿದ ತಂದೆಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ ಆದೇಶ ಹೊರಡಿಸಿದೆ.

Nagesh Talawar
ಕಲಬುರಗಿ: ಮಗನನ್ನು ಕೊಂದ ತಂದೆಗೆ ಜೀವಾವಧಿ ಶಿಕ್ಷೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕಲಬುರಗಿ(Kalaburagi): ಚಾಕುವಿನಿಂದ ಮಗನಿಗೆ ಚುಚ್ಚಿ ಕೊಲೆ ಮಾಡಿದ ತಂದೆಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ ಆದೇಶ ಹೊರಡಿಸಿದೆ. ಇದರ ಜೊತೆಗೆ 10,500 ರೂಪಾಯಿ ದಂಡ ವಿಧಿಸಿದೆ. ತಾಜನಗರದ ಮಹ್ಮದ್ ಯೂಸುಫ್ ವಾಡಿವಾಲೆ(42) ಎಂಬಾತನಿಗೆ ಶಿಕ್ಷೆ ನೀಡಲಾಗಿದೆ.

ಘಟನೆ ಹಿನ್ನಲೆ: 2024, ಮೇ 31ರಂದು ಅಪರಾಧಿ ಮಹ್ಮದ್ ಹೆಂಡ್ತಿಯೊಂದಿಗೆ ಜಗಳವಾಡಿದ್ದಾನೆ. ತಂದೆ, ತಾಯಿ ಜಗಳವನ್ನು ಮಗ ಅಸ್ರರ್ ಅಹ್ಮದ್(24) ಬಿಡಿಸಲು ಹೋಗಿದ್ದಾನೆ. ತಾಯಿ ಪರವಾಗಿ ತಂದೆಯನ್ನು ಪ್ರಶ್ನಿಸಿದ್ದಾನೆ. ನನಗೆ ಬುದ್ದಿ ಹೇಳಲು ಬರುತ್ತಿಯಾ ಎಂದು ಅಡುಗೆ ಮನೆಗೆ ಹೋಗಿ ಚಾಕು ತಂದು ಮಗನ ಹೊಟ್ಟೆಗೆ, ರಟ್ಟೆ, ಮುಂಗೈಗೆ ಚುಚ್ಚಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಜೂನ್ 3ರಂದು ಮೃತಪಟ್ಟಿದ್ದಾನೆ. ಈ ಪ್ರಕರಣ ಸಂಬಂಧ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

WhatsApp Group Join Now
Telegram Group Join Now
Share This Article