ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಹುಕೋಟಿ ಬಿಟ್ ಕಾಯಿನ್(Bitcoin) ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಗೆ ಎಸ್ಐಟಿ(SIT) ನೋಟಿಸ್ ನೀಡಿದೆ. ಹೀಗಾಗಿ ಇವರಿಗೆ ಬಂಧನ ಭೀತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕಷ್ಣ ಅಲಿಯಾಸ್ ಶ್ರೀಕಿ ಜೊತೆಗೆ ನಲಪಾಡ್ ಸಂಪರ್ಕವಿದ್ದು, ಹಣಕಾಸಿನ ವ್ಯವಹಾರ ನಡೆದಿದೆ ಎನ್ನುವ ಆರೋಪವಿದೆ. ಹೀಗಾಗಿ ಶುಕ್ರವಾರ ವಿಚಾರಣೆಗೆ ಬರುವಂತೆ ಎಸ್ಐಟಿ ನೋಟಿಸ್ ನೀಡಿದೆ.
ಸೆಕ್ಷನ್ 41ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಇದರು 2ನೇ ಬಾರಿ ಆಗಿದೆ. ಕಳೆದ ಕೆಲವು ತಿಂಗಳ ಹಿಂದೆ ಒಮ್ಮೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದೆ. ಶ್ರೀಕಿಯಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದಾರೆ ಎನ್ನುವ ಆರೋಪವಿದೆ. ಆತನೊಂದಿಗೆ ವ್ಯವಹಾರ ಹೊಂದಿದ್ದಾರೆ ಎನ್ನುವ ಶಂಕೆ ಇದ್ದು, ಹೀಗಾಗಿ ಮತ್ತೆ ವಿಚಾರಣೆಗೆ ಕರೆದಿದ್ದು, ಬಂಧನವಾಗುವ ಭೀತಿ ನಲಪಾಡ್ ಗೆ ಎದುರಾಗಿದೆ. ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಈ ಹಿಂದೆ ಒಂದಲ್ಲ ಒಂದು ಕಾರಣದಿಂದ ವಿವಾದ ಮಾಡಿಕೊಂಡು ಬರುತ್ತಲೇ ಇದ್ದರು.