ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಮನ್ನಾಪುರ, ಬಂಕಲಗಿ ಹಾಗೂ ಯರಗಲ್ ಬಿ.ಕೆ ಗ್ರಾಮದ ವ್ಯಾಪ್ತಿಯಲ್ಲಿರುವ ಸಂಗಮನಾಥ ಸಕ್ಕರೆ ಕಾರ್ಖಾನೆಯಿಂದ ರಾಸಾಯನಯುಕ್ತ ಕಲುಷಿತ(Chemically Contaminated Water) ನೀರನ್ನು ಪಕ್ಕದಲ್ಲಿರುವ ಹಳ್ಳಕ್ಕೆ ಬಿಡಲಾಗಿದೆ. ಇದರಿಂದ ಕುರಿಗಳು, ಮೀನು ಮೃತಪಟ್ಟಿವೆ. ಅಲ್ಲದೇ ಬೆಳೆಗಳು ಹಾಳಾಗಿದ್ದು, ಕಾರ್ಖಾನೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನಮ್ಮ ಕರ್ನಾಟಕ ಸೇನೆ ವತಿಯಿಂದ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿದೆ.
ಹಳ್ಳದ ನೀರನ್ನು ಗ್ರಾಮಸ್ಥರು ಕುಡಿಯುತ್ತಾರೆ. ಜಾನುವಾರು ಸಹ ಕುಡಿಯುತ್ತವೆ. ಇದೀಗ ಕಲುಷಿತ ನೀರು ಕುಡಿದು ಕುರಿಗಳು(Goat) ಮೃತಪಟ್ಟಿವೆ. ಹಳ್ಳದಲ್ಲಿನ ಮೀನುಗಳು(Fish) ಸಾವನ್ನಪ್ಪಿವೆ. ಹೀಗಾಗಿ ಸಂಗಮನಾಥ ಸಕ್ಕರೆ ಕಾರ್ಖಾನೆ ವಿರುದ್ದು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ನಷ್ಟ ಹೊಂದಿದ ರೈತರಿಗೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರಿಗೆ ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಮಹೇಶ ನಾಯಕ, ತಾಲೂಕಾಧ್ಯಕ್ಷ ಪುಂಡುಲಿಕ ಬಿರಾದಾರ ನೇತೃತ್ವದಲ್ಲಿ ಪದಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಲಾಗಿದೆ.