Ad imageAd image

ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಹೊಡೆದಾಟ

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ತೀವ್ರ ಗದ್ದಲ ಗಲಾಟೆ ನಡೆದಿದೆ.

Nagesh Talawar
ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಹೊಡೆದಾಟ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಶ್ರೀನಗರ(Srinagara): ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ತೀವ್ರ ಗದ್ದಲ ಗಲಾಟೆ ನಡೆದಿದೆ. ಇದು ವಿಕೋಪಕ್ಕೆ ಹೋಗಿ ಶಾಸಕರು ಹೊಡೆದಾಡಿಕೊಂಡಿದ್ದಾರೆ. ವಿಶೇಷ ಸ್ಥಾನಮಾನ(Article 370) ಮರುಸ್ಥಾಪಿಸುವುದರ ವಿರುದ್ಧ ಪ್ರತಿಪಕ್ಷ ಶಾಸಕರು ಪ್ರತಿಭಟನೆ ನಡೆಸಿ ಸದನದ ಬಾವಿಗೆ ಇಳಿದರು. ಈ ವೇಳೆ ಮೂವರು ಬಿಜೆಪಿ ಶಾಸಕರನ್ನು ಹೊರ ಹಾಕಲು ಸ್ಪೀಕರ್ ಅಬ್ದುಲ್ ರಹೀತ್ ರಾಥರ್ ಮಾರ್ಷಲ್ ಗಳಿಗೆ ಹೇಳಿದರು. ಈ ವೇಳೆ ಗಲಾಟೆ ನಡೆದಿದೆ.

ನಿನ್ನೆ ಅಂಗೀಕರಿಸಿದ ನಿರ್ಣಯದ ವಿರುದ್ಧ ಇಂದು ಬಿಜೆಪಿ(BJP) ಸದಸ್ಯರು ಪ್ರತಿಭಟನೆ ಶುರು ಮಾಡಿದರು. ವಿಪಕ್ಷ ನಾಯಕ ಸುನಿಲ್ ಶರ್ಮಾ ನಿರ್ಣಯದ ಮೇಲೆ ಮಾತನಾಡುತ್ತಿದ್ದಾಗ, ಅವಾಮಿ ಇತ್ತೆಹಾದ್ ಪಕ್ಷದ ನಾಯಕ, ಶಾಸಕ ಲಂಗೇಟ್ ಶೇಖರ್, ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರುಸ್ಥಾಪಿಸಬೇಕು ಎಂದು ಬೋರ್ಡ್ ಹಿಡಿದು ಸದನದ ಬಾವಿಗೆ ಇಳಿದರು. ಆಗ ಬಿಜೆಪಿ ಸದಸ್ಯರು ಸದನ ಬಾವಿಗೆ ಇಳಿದು ಬ್ಯಾನರ್ ಹಿರಿದರು. ಆಗ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು.

ಮತ್ತೆ ಕಲಾಪ ಶುರುವಾದ್ಮೇಲೆ ತಮ್ಮ ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳಲು ಸ್ಪೀಕರ್ ಸದಸ್ಯರಿಗೆ ಹೇಳಿದರು. ಆದರೆ, ಬಿಜೆಪಿ ಶಾಸಕರು ಪ್ರತಿಭಟನೆ ಮುಂದುವರೆಸಿದರು. ನೀವು ನಿಯಮಗಳನ್ನು ಮೀರಿ ನಡೆದುಕೊಳ್ಳುತ್ತಿದ್ದೀರಿ. ಕ್ಯಾನಷನ್ ಕಾನ್ಪ್ ರೆನ್ಸ್ ನಾಯಕರು ವಿಶೇಷ ಸ್ಥಾನಮಾನ ಮರುಸ್ಥಾಪನೆಯ ನಾಟಕ ಬಿಡಬೇಕು ಎಂದು ವಿಪಕ್ಷ ನಾಯಕ ಸುನಿಲ್ ಶರ್ಮಾ ಹೇಳಿದ್ದು, ಅವರನ್ನು ಕೆರಳಿಸಿದೆ. ಇದನ್ನು ನಾನು ಗಮನಿಸುತ್ತಿದ್ದೇನೆ ಎಂದು ಹೇಳಿದ ಸ್ಪೀಕರ್ ಕಲಾಪವನ್ನು(Session) ನಾಳೆಗೆ ಮುಂದೂಡಿದರು.

WhatsApp Group Join Now
Telegram Group Join Now
Share This Article