ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡ ಚಲನಚಿತ್ರ ರಂಗದಲ್ಲಿ ಕಲಾವಿದೆಯವರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಸಂಬಂಧ ಸಮಿತಿ ರಚಿಸಬೇಕು ಎಂದು ನಿರ್ದೇಶಕಿ ಕವಿತಾ ಲಂಕೇಶ್ ಅಧ್ಯಕ್ಷತೆಯ ಫೈರ್ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದೆ. ಈ ಸಂಸ್ಥೆಯ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್ ಕಿಡಿ ಕಾರಿದ್ದಾರೆ. ಚಿತ್ರರಂಗದಲ್ಲಿ ಯಾರಿಗೂ ಏನೂ ತೊಂದರೆಯಾಗಿಲ್ಲ. ತೊಂದರೆಯಾದರೆ ಅದನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಶೋಷಣೆ, ದೌರ್ಜನ್ಯ ನಡೆದಲ್ಲಿ ನಮಗೆ ನೇರವಾಗಿ ದೂರು ಕೊಡಿ. ಫೈರ್ ಸಂಸ್ಥೆ ಅಥವ ಇನ್ಯಾವುದೋ ಸಂಸ್ಥೆಗೂ ನಮಗೂ ಸಂಬಂಧವಿಲ್ಲ. ಚೇತನ್ ಅವರೆ ನಿಮ್ಮ ಕೆಲಸದ ವ್ಯಾಪ್ತಿಯನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ನಮಗೂ ಹೆಣ್ಮಕ್ಕಳ ಬಗ್ಗೆ ಕಾಳಜಿ ಇದೆ. ಅವರಿಗೆ ಗೌರವ ಕೊಡುವುದು ನಮ್ಮ ಧರ್ಮ ಎಂದರು.
ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆ ಸಂಬಂಧ ನಾವು ಕಾನೂನು ತಜ್ಞರ ಜೊತೆ ಮಾತನಾಡುತ್ತೇವೆ. ಹೀಗಾಗಿ ಮಹಿಳಾ ಆಯೋಗದ ಪತ್ರದ ಉತ್ತರಕ್ಕೆ ಕಾಲಾವಕಾಶ ಕೊಡಿ ಎಂದು ಪತ್ರ ಬರೆಯುತ್ತೇವೆ. ಕೇರಳ ಚಲನಚಿತ್ರದವರು ಅವರದೆ ಸಮಿತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರಿಗೂ ಪತ್ರ ಬರೆದಿದ್ದೇವೆ. ನಾವು ನಮ್ಮದೆ ಸಮಿತಿ ಮಾಡುತ್ತೇವೆ ಎಂದು ಹೇಳಿದರು. ಇಂದು ನಟಿ ಭಾವನಾ ರಾಮಯ್ಯ, ನಿರ್ದೇಶ ಟೇ.ಶ ವೆಂಕಟೇಶ್ ನೇತೃತ್ವದಲ್ಲಿ ಕರ್ನಾಟಕ ಚಲನಚಿತ್ರ ಸಂರಕ್ಷಣಾ ವೇದಿಕೆಯ ಸದಸ್ಯರು ಪಾಶ್(ಲೈಂಗಿಕ ದೌರ್ಜನ್ಯ ತಡೆ) ವಿರುದ್ಧ ಮನವಿ ಸಲ್ಲಿಸಿದರು.