Ad imageAd image

ಸಿಂದಗಿ: ರಾಷ್ಟ್ರೀಯ ಹಬ್ಬಗಳಿಗೆ ಇಲಾಖೆಗಳಿಂದಲೇ ಸಿಗದ ಹಣದ ನೆರವು!

ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯನ್ನು ಮಂಗಳವಾರ ತಾಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

Nagesh Talawar
ಸಿಂದಗಿ: ರಾಷ್ಟ್ರೀಯ ಹಬ್ಬಗಳಿಗೆ ಇಲಾಖೆಗಳಿಂದಲೇ ಸಿಗದ ಹಣದ ನೆರವು!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯನ್ನು ಮಂಗಳವಾರ ತಾಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದು, ಅವರ ಪರವಾಗಿ ಇತರೆ ಸಿಬ್ಬಂದಿ ಹಾಜರಿದ್ದರು. ಈ ವೇಳೆ ಆಗಸ್ಟ್ 15ರಂದು ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯಂದು(independence day) ಏನೆಲ್ಲ ಕಾರ್ಯಕ್ರಮ ಮಾಡಬಹುದು ಎನ್ನುವುದರ ಕುರಿತು ಚರ್ಚಿಸಲಾಯಿತು.

ಆಗಸ್ಟ್ 15, ಜನವರಿ 26ರಂದು ಆಚರಿಸುವ ಎರಡು ರಾಷ್ಟ್ರೀಯ ಹಬ್ಬಗಳಿಗೆ ತಾಲೂಕಿನ ಬಹುತೇಕ ಇಲಾಖೆಗಳಿಂದ ಸರಿಯಾದ ರೀತಿಯಲ್ಲಿ ಹಣದ ನೆರವು ಸಿಗುತ್ತಿಲ್ಲವೆಂದು ತಾಲೂಕು ದಂಡಾಧಿಕಾರಿಗಳ ಇಲಾಖೆಯ ಸಿಬ್ಬಂದಿ ಹೇಳಿದರು. ಸಭೆಯಲ್ಲಿ ಕೊಡುತ್ತೇವೆ ಎಂದು ಒಪ್ಪಿಕೊಂಡು ನಂತರ ಹಣ ಕೊಡದೆ ಸತಾಯಿಸುವುದು, ಫೋನ್ ಸ್ವಿಚ್ ಆಫ್ ಮಾಡುವುದು ಮಾಡುತ್ತಾರೆ. ಕೈಯಿಂದ ಖರ್ಚು ಮಾಡಿದರೂ ಒಪ್ಪಿಕೊಂಡ ಅಧಿಕಾರಿಗಳು ಹಣ ಕೊಡುತ್ತಿಲ್ಲವೆಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ತಹಶೀಲ್ದಾರ್ ಅವರು ಹೇಳಿದರು.

ಮೈದಾನದ ಸ್ವಚ್ಛತೆ, ವೇದಿಕೆ, ಪಟ್ಟಣದಲ್ಲಿರುವ ವೃತ್ತಗಳ ಅಲಂಕಾರ, ಆಮಂತ್ರಣ ಪತ್ರಿಕೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸರ್ಕಾರಿ ಶಾಲೆ ಮಕ್ಕಳು ಸೇರಿ ಖಾಸಗಿ, ಅನುದಾನಿತ ಶಾಲಾ ಮಕ್ಕಳಿಂದ ಪಥ ಸಂಚಲನ, ಬ್ಯಾಂಡ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಲಘು ಉಪಹಾರ, ಹಾಲು ವಿತರಣೆ, ಆರೋಗ್ಯ, ಅಗ್ನಿಶಾಮಕ ಇಲಾಖೆಯಿಂದ ತುರ್ತು ಸೇವೆ ಸಿದ್ಧತೆ, ಅರಣ್ಯ ಇಲಾಖೆಯಿಂದ ಉಪನ್ಯಾಸ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರತಿಯೊಂದು ಇಲಾಖೆಗಳಿಗೆ ಜವಾಬ್ದಾರಿ ನೀಡಲಾಯಿತು. ಈ ವೇಳೆ ಪಿಎಸ್ಐ ಆರೀಫ್ ಮೂಶಾಫಿರ್, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಕಸಾಪ ಅಧ್ಯಕ್ಷ ಶಿವಾನಂದ ಬಡಾನವರ, ಜಿಪಿ ಪೋರವಾಲ ಕಾಲೇಜಿನ ದೈಹಿಕ ನಿರ್ದೇಶಕ ರವಿ ಗೋಲಾ ಸೇರಿ ಹಲವರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article