ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ(Chamarajanagara): ಮನುಷ್ಯನ ಅತಿಯಾಸೆಗೆ ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಹೀಗಿರುವಾಗ ಮತ್ತೆ ತನ್ನ ಗುಣ ತೋರಿಸಿ ಅವುಗಳಿಗೆ ಕಿರಿಕಿರಿ ಮಾಡುವ ಕೆಲವು ಜನರು ಇರುತ್ತಾರೆ. ಇಂತವರಲ್ಲಿ ಒಬ್ಬನಾದವನು ಕಾಡಾನೆಗೆ ಕಿರಿಕಿರಿ ಮಾಡಿದ್ದಾನೆ. ಹೆದ್ದಾರಿಗೆ ಬಂದ ಆನೆಯನ್ನು ನೋಡಿ ಸುಮ್ನೆ ಇರುವುದು ಬಿಟ್ಟು ಅದರ ಮುಂದೆ ಹುಚ್ಚಾಟ ಮಾಡಿದ್ದಾನೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಪರಿಣಾಮ ಅರಣ್ಯ ಇಲಾಖೆ ಆತನನ್ನು ಪತ್ತೆ ಹಚ್ಚಿ ದಂಡ ಹಾಕಿದ್ದಾರೆ.
ಗುಂಡ್ಲುಪೇಟೆ-ಊಟಿ ಹೆದ್ದಾರಿ ಮಾರ್ಗದಲ್ಲಿನ ಬಂಡೀಪುರದಲ್ಲಿ ಆನೆಯೊಂದು ರೋಡಿಗೆ ಬಂದಿದೆ. ಅದನ್ನು ನೋಡಿದ ಯುವಕನೊಬ್ಬ ಅದರ ಫೋಟೋ ತೆಗೆಯುತ್ತಾ ಗಲಾಟೆ ಮಾಡಿದ್ದಾನೆ. ಅದಕ್ಕೆ ಕಿರಿಕಿರಿ ಮಾಡಿದ್ದಾನೆ. ಇದನ್ನು ಗಮನಿಸಿರುವ ಪರಿಸರವಾದಿಗಳು ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದೀಗ ಅರಣ್ಯಾಧಿಕಾರಿಗಳು ಆತನಿಗೆ 25 ಸಾವಿರ ದಂಡ ಹಾಕಿದ್ದಾರೆ. ವನ್ಯಜೀವಿಗಳಿಗೆ ತೊಂದರೆ ಕೊಡುವುದಿಲ್ಲವೆಂದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.