ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರೌಡಿ ಶೀಟರ್ ಬಿಕ್ಲ ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಂಧನದ ಭೀತಿಯಿಂದ ಕೋರ್ಟ್ ಮೆಟ್ಟಿಲು ಹತ್ತಿದ್ದು, ತಮ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿದ್ದಾರಂತೆ. ಇಂದು ನ್ಯಾಯಮೂರ್ತಿ ಕೃಷ್ಣಕುಮಾರ್ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಕೊಲೆ ಆರೋಪಿಗಳಾದ ಜಗ್ಗ, ಕಿರಣ ಸೇರಿ ಹಲವರೊಂದಿಗೆ ಭೈರತಿ ಬಸವರಾಜ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ಸಿವಿಲ್ ಪ್ರಕರಣಗಳಲ್ಲಿ ಜಗ್ಗ ಭಾಗಿಯಾಗಿರುವ ಮಾಹಿತಿಯೂ ಸಿಕ್ಕಿದೆ. ಶಾಸಕ ಭೈರತಿ ಬಸವರಾಜಗೆ ಆಪ್ತವಾಗಿರುವ ಜಗದೀಶ ಅಲಿಯಾಸ್ ಜಗ್ಗ, ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನಂತೆ. ಹೀಗಾಗಿ ಕಳೆದ 10 ವರ್ಷಗಳ ಹಿಸ್ಟರಿಯಲ್ಲಿ ಪೊಲೀಸರು ಕೆದಕುತ್ತಿದ್ದಾರೆ. ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಭೈರತಿ ಬಸವರಾಜ, ಜಗ್ಗ ವಿರುದ್ಧ ಬಿಕ್ಲ ಶಿವ ಎಫ್ಐಆರ್ ದಾಖಲಿಸಿದ್ದ. ಆಗ ಜಗ್ಗ ಕೋರ್ಟ್ ನಿಂದ ಸ್ಟೇ ತೆಗೆದುಕೊಂಡು ಬಂದಿದ್ದನಂತೆ.