ಪ್ರಜಾಸ್ತ್ರ ಸುದ್ದಿ
ಅಥಣಿ(Athani): ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಲಕ್ಷ್ಮಣ ಸವದಿ ಹಾಗೂ ಇವರ ಪುತ್ರ ಚಿದಾನಂದ ಹಾಗೂ ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಭಾನುವಾರ ತಡರಾತ್ರಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ನಿಂಗಪ್ಪ ಕರೆಣ್ಣವರ ನೀಡಿದ ದೂರಿನಲ್ಲಿ, ನಾಲ್ಕು ಕೂಡಿಕೊಂಡು ಲಕ್ಷ್ಮಣ ಸವದಿ ಅವರ ಮನೆಗೆ ಹೋಗಿದ್ದೇವು. ಶಾಸಕರು ಅವಾಚ್ಯ ಶಬ್ಧಗಳಿಂದ ಬೈದರು ಜೊತೆಗೆ ಕಪಾಳಕ್ಕೆ ಹೊಡೆದರು. ಅವರ ಪುತ್ರ ಸೊಂಟಕ್ಕೆ ಒದ್ದರು. ಏಳೆಂಟು ಜನ ಬೆಂಬಲಿಗರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದರು ತಿಳಿಸಿದ್ದಾರೆ.




