ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬದುಕಿನಲ್ಲಿ ಮೌಲ್ಯಗಳನ್ನಿಟ್ಟುಕೊಂಡು ಸತ್ಯ, ನ್ಯಾಯದ ಪರ ಕೆಲಸ ಮಾಡಬೇಕಾದ ಪೊಲೀಸ್ ಅಧಿಕಾರಿಯ ವಿರುದ್ಧವೇ ಎಫ್ಐಆರ್ ದಾಖಲಾಗಿದೆ. ಅದು ಪರಸ್ತ್ರೀ ಸಂಘ ಮಾಡಿದ ಕಾರಣಕ್ಕೆ ಪತ್ನಿಯೇ ದೂರು ನೀಡಿದ್ದು, ಬೆಂಗಳೂರು ನಗರ ಈಶಾನ್ಯ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಡಿವೈಎಸ್ಪಿ ಶಂಕ್ರೆಪ್ಪ ವಿರುದ್ಧ ಇಂತಹ ಆರೋಪ ಕೇಳಿ ಬಂದಿದೆ. ಅಲ್ಲದೆ ಪತ್ನಿಗೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಿಳೆಯೊಬ್ಬರೊಂದಿಗೆ ಅಕ್ರಮವಾಗಿ ವಿವಾಹವಾಗಿದ್ದಾರೆ. ಇದರಿಂದಾಗಿ ನನಗೆ ಹಿಂಸೆ ನೀಡುತ್ತಿದ್ದಾರೆ. ಪತಿಯಿಂದ ದೂರ ಇರುವಂತೆ ಮಹಿಳೆಗೆ ಹೇಳಿದರೂ ಕೇಳದೆ ನನಗೆ ಜೀವ ಬೆದರಿಕೆ ಹಾಕಿದ್ದಾಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಡಿಜಿ ಮತ್ತು ಐಜಿಪಿ ಅವರಿಗೂ ದೂರು ಸಲ್ಲಿಸಿದ್ದಾರೆ. ಡಿವೈಎಸ್ಪಿ ಶಂಕ್ರೆಪ್ಪ ಹಾಗೂ ಮಹಿಳೆಯ ವಿರುದ್ಧ ಎಫ್ಐಆರ್ ದಾಖಲಾಗಿದೆ.