ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಹೌಸ್ ಅರೆಸ್ಟ್ ಎನ್ನುವ ವೆಬ್ ಶೋನಲ್ಲಿ ಅಶ್ಲೀಲ ವಿಚಾರ ಪ್ರಾಸರವಾಗಿದೆ ಎಂದು ನೀಡಿದ ದೂರಿನ ಆಧಾರದ ಮೇಲೆ ನಟ, ನಿರ್ಮಾಪಕ ಸೇರಿದಂತೆ ಇತರರ ಮೇಲೆ ಎಫ್ಐಆರ್ ಆಗಿದೆ. ನಟ ಅಜಾಜ್ ಖಾನ್, ನಿರ್ಮಾಪಕ ರಾಜಕುಮಾರ್ ಪಾಂಡೆ ಸೇರಿದಂತೆ ಇತರರ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಭಜರಂಗದಳ ಕಾರ್ಯಕರ್ತ ಗೌತಮ್ ರವ್ರಿಯಾ ಈ ಕುರಿತು ದೂರು ನೀಡಿದ್ದರು.
ಉಲ್ಲು ಆ್ಯಪ್ ನಲ್ಲಿ ಹೌಸ್ ಅರೆಸ್ಟ್ ಅನ್ನೋ ವೆಬ್ ಶೋ ಪ್ರಸಾರವಾಗುತ್ತಿದೆ. ಮಹಿಳೆಯರು ಹಾಗೂ ಇತರರಿಗೆ ನಟ ಅಜಾಜ್ ಖಾನ್ ತುಂಬಾ ಆತ್ಮೀಯವಾಗಿ ವರ್ತಿಸಲು ಹೇಳಿದ್ದಾರೆ. ಸ್ಪರ್ಧಿಗಳಿಗೆ ಕೆಟ್ಟ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಶೋ ಅಶ್ಲೀಲ ಭಾಷೆಯಿಂದ ಕೂಡಿದೆ. ಇದರಿಂದ ಸಮಾಜದಲ್ಲಿ ಕೆಟ್ಟ ಪರಿಣಾಮ ಬೀರುತ್ತೆ. ಕುಟುಂಬದೊಂದಿಗೆ ಕುಳಿತು ಇಂತಹ ಶೋ ನೋಡಲು ಸಾಧ್ಯವಿಲ್ಲ ಎಂದು ಸಾರ್ವಜಿಕರು ಆಕ್ಷೇಪಿಸಿದ್ದಾರೆ ಅಂತಾ ದೂರಿನಲ್ಲಿ ತಿಳಿಸಲಾಗಿದೆ.