ಪ್ರಜಾಸ್ತ್ರ ಸುದ್ದಿ
ಬೀದರ(Bidara): ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಔರಾದ್ ಶಾಸಕ ಪ್ರಭು ಚೌವಾಣ ಮಗನ ವಿರುದ್ಧ, ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಹಾರಾಷ್ಟ್ರದ ಉದಯಗೀರ್ ಹತ್ತಿರದ ಹಣೆಗಾಂವ್ ತಾಂಡಾದ ಯುವತಿ ಸಂಧ್ಯಾ ರಾಠೋಡ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.
2023ರಲ್ಲಿ ಪ್ರಭು ಚೌವಾಣನ ಪುತ್ರ ಪ್ರತೀಕ್ ಜೊತೆಗೆ ಔರಾದ್ ತಾಲೂಕಿನ ಘಮಸುಬಾಯಿ ಬೊಂತಿ ತಾಂಡಾದಲ್ಲಿ ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥವಾಗಿದೆ. ನಂತರ ನಾವು ಅನೇಕ ಕಡೆ ಸುತ್ತಾಡಿದ್ದೇವೆ. ಈ ವೇಳೆ ಬಲವಂತವಾಗಿ ಪ್ರತೀಕ್ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.