Ad imageAd image

ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆಗಳ ವಿರುದ್ಧ ಎಫ್ಐಆರ್

ಸಿನಿಮಾ ಚಿತ್ರೀಕರಣದ ಸಲುವಾಗಿ ನೂರಾರು ಮರಗಳನ್ನು ಕಡಿದ ಆರೋಪ ಸಂಬಂಧ, ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ನಿರ್ಮಾಣ

Nagesh Talawar
ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆಗಳ ವಿರುದ್ಧ ಎಫ್ಐಆರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸಿನಿಮಾ ಚಿತ್ರೀಕರಣದ ಸಲುವಾಗಿ ನೂರಾರು ಮರಗಳನ್ನು ಕಡಿದ ಆರೋಪ ಸಂಬಂಧ, ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಚಿತ್ರ ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಹಾಗೂ ಯಶ್ ಒಡೆತನದ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್ ವಿರುದ್ಧ ಎಫ್ಐಆರ್(FIR) ದಾಖಲಿಸಲಾಗಿದೆ. ಹೀಗಾಗಿ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗಿದೆ.

ಬೆಂಗಳೂರು ಎಚ್ಎಂಟಿ ಕಾರ್ಖಾನೆ ಹತ್ತಿರ ಇರುವ ಅರಣ್ಯ ಭೂಮಿಯಲ್ಲಿ ನೂರಾರು ಮರಗಳನ್ನು ಕಡಿದು ಸೆಟ್ ನಿರ್ಮಿಸಿ ತಿಂಗಳುಗಳ ಕಾಲ ಶೂಟಿಂಗ್ ಮಾಡಿರುವ ಆರೋಪವಿದೆ. ಕೋರ್ಟ್ ಸೂಚನೆಯಂತೆ ಚಿತ್ರ ನಿರ್ಮಾಣ ಸಂಸ್ಥೆಗಳು, ಕೆನರಾ ಬ್ಯಾಂಕ್(Canara Bank) ಜನರಲ್ ಮ್ಯಾನೇಜರ್ ಹಾಗೂ ಹೆಚ್ಎಂಟಿ(HMT) ಲಿಮಿಟೆಡ್ ವಿರುದ್ಧ ಸಹ ಕೇಸ್ ದಾಖಲಾಗಿದೆ. ಈ ಸಂಬಂಧ ಎಲ್ಲರಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

WhatsApp Group Join Now
Telegram Group Join Now
Share This Article