ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿನ್ನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ನಟ ಧರ್ಮೇಂದ್ರ ಸೇರಿ ಹಲವರ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವರಾಹಿ ವರ್ಲ್ಡ್ ಆಫ್ ಗೋಲ್ಡ್ ಮಾಲೀಕರಾದ ವನಿತಾ ಐತಾಳ್ ಎಂಬುವರು ದೂರು ದಾಖಲಿಸಿದ್ದಾರೆ. ಆರ್.ಆರ್ ನಗರದ ನಿವಾಸಿ ಐಶ್ವರ್ಯಾ ಅಲಿಯಾಸ್ ನವ್ಯಶ್ರೀ ಎನ್ನುವ ಮಹಿಳೆ ಮಾಜಿ ಸಂಸದ ಡಿ.ಕೆ ಸುರೇಶ್ ಸಹೋದರಿ ಎಂದು ಪರಿಚಯ ಮಾಡಿಕೊಂಡು ಹಂತ ಹಂತವಾಗಿ ವಂಚಿಸಿದ್ದಾಳಂತೆ.
ಬರೋಬ್ಬರಿ 9.14 ಕೋಟಿ ರೂಪಾಯಿ ಮೌಲ್ಯದ 14 ಕೆಜಿ 660 ಗ್ರಾಂ ಚಿನ್ನವನ್ನು ಹಂತ ಹಂತವಾಗಿ ಖರೀದಿಸಿದ್ದಾರಂತೆ. ಹಣ ಕೇಳಿದಾಗ ನಟ ಧರ್ಮೇಂದ್ರನಿಂದ ಫೋನ್ ಮಾಡಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಮಾಡಿದ್ದಾರಂತೆ. ಈ ಸಂಬಂಧ ನಟ ಧರ್ಮೇಂದ್ರಗೌಡ, ಐಶ್ವರ್ಯಗೌಡ ಅಲಿಯಾಸ್ ನವ್ಯಶ್ರೀ, ಈಕೆ ಪತಿ ಹಾಗೂ ಶ್ವೇತಾಗೌಡ ಎನ್ನುವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.