ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿರುವ ಗಣೇಶ ಚಿತ್ರಮಂದಿರದಲ್ಲಿ ಬೆಂಕಿ ಅನಾಹುತವಾಗಿದೆ. ಆಕಸ್ಮಿಕ ಬೆಂಕಿ ಅವಗಡದಿಂದಾಗಿ ಸಾಕಷ್ಟು ನಷ್ಟವಾಗಿದೆ. ಕಳೆದ ರಾತ್ರಿ ಈ ಘಟನೆ ನಡೆದಿದೆ. ಕೆಲ ವರ್ಷಗಳಿಂದ ಈ ಚಿತ್ರಮಂದಿರ ಬಂದ್ ಆಗಿತ್ತು. ಇಂದಿನ ಡಿಜಿಟಲ್ ಮಾರುಕಟ್ಟೆಯ ಹೊಡೆತಕ್ಕೆ ಥಿಯೇಟರ್ ಸಿಲುಕಿ ಒದ್ದಾಡಿತ್ತಿವೆ. ಹೀಗಿರುವಾಗ ಬೆಂಕಿ ಅನಾಹುತದಿಂದ ಮತ್ತಷ್ಟು ನಷ್ಟವಾಗಿದೆ.
ಸ್ಥಳೀಯರು ಇದನ್ನು ಕಂಡು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ ಸಾಧ್ಯವಾಗಿಲ್ಲ. ಅಗ್ನಿಶಾಮಕ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹರಿಹರದಿಂದ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದರು. ಈ ಒಂದು ಅನಾಹುತಕ್ಕೆ ಏನು ಕಾರಣವೆಂದು ತಿಳಿದು ಬಂದಿಲ್ಲ. ಇದರ ತನಿಖೆ ನಡೆಯುತ್ತಿದೆ.