ಪ್ರಜಾಸ್ತ್ರ ಸುದ್ದಿ
ಕೋಲ್ಕತ್ತಾ(Kolakta): ಪಶ್ಚಿಮ ಬಂಗಾಳದ ಕೋಲ್ಕತ್ತಾದ ಹೋಟೆಲ್ ವೊಂದರಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಇದುವರೆಗೂ 15 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೆಚುಆಪಟ್ಟಿ ಪ್ರದೇಶದ ಹೋಟೆಲ್ ನಲ್ಲಿ ಇಂತಹದೊಂದು ಘೋರ ದುರಂತ ನಡೆದಿದೆ. 13 ಮಂದಿ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಹೇಗೆ ನಡೆಯಿತು ಅನ್ನೋದು ತಿಳಿದು ಬಂದಿಲ್ಲ. ಇದರ ತನಿಖೆಗೆ ಸರ್ಕಾರ ಎಸ್ಐಟಿ ನೇಮಿಸಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳಕ್ಕೆ ಭೇಟಿ ಕೊಟ್ಟಿದೆ. 10 ಅಗ್ನಿ ಶಾಮಕ ಸಿಬ್ಬಂದಿ ಬೆಳಗಿನಜಾವ ಸುಮಾರು 3.30ರ ತನಕ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. 42 ರೂಮುಗಳಿರುವ ಹೋಟೆಲ್ ನಲ್ಲಿ 88 ಜನರು ತಂಗಿದ್ದರು.