Ad imageAd image

ಬೆಂಕಿ ಅನಾಹುತ, 3 ಅಂಗಡಿಗಳು ಭಸ್ಮ

Nagesh Talawar
ಬೆಂಕಿ ಅನಾಹುತ, 3 ಅಂಗಡಿಗಳು ಭಸ್ಮ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ತುಮಕೂರು(Tumakoru): ಬೆಂಕಿ ಅನಾಹುತದಿಂದಾಗಿ ಮೂರು ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಸೋಮವಾರ ಮುಂಜಾನೆ ನಗರ ವಿಶ್ವವಿದ್ಯಾಲಯ ಹತ್ತಿರ ನಡೆದಿದೆ. ಮೊಬೈಲ್ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಇನ್ನುಳಿದ 2 ಅಂಗಡಿಗಳಿಗೂ ತಗುಲಿದೆ. ಇದರ ಪರಿಣಾಮ ಅಪಾರ ಪ್ರಮಾಣದ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಮೊಬೈಲ್ ಮಾರ್ಟ್, ಸೌತ್ ಹೋಳಿಗೆ ಮನೆ, ಎಸ್ಎಂಎಲ್ ತರಕಾರಿ ಅಂಗಡಿ ಸುಟ್ಟು ಹೋಗಿವೆ. ಮೊಬೈಲ್ ಗಳು, ಸಿಸಿಟಿವಿ, ಫ್ರಿಡ್ಜ್ ಸುಟ್ಟು ಹೋಗಿವೆ. ಶಾರ್ಟ್ ಸರ್ಕೀಟ್ ನಿಂದ ಈ ಅವಗಡ ನಡೆದಿದೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article