ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ನಾವಗೆ ಕೈಗಾರಿಕ ಪ್ರದೇಶದಲ್ಲಿನ ಇನ್ಸುಲೆನ್ ಟೇಪ್ ತಯಾರಿಕ ಕಾರ್ಖಾನೆಯಲ್ಲಿ ಕಳೆದ ರಾತ್ರಿ ಅಗ್ನಿ(Fire accident) ಅನಾಹುತ ಸಂಭವಿಸಿದೆ. ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 70 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸಧ್ಯದ ಮಾಹಿತಿ ಪ್ರಕಾರ ಶೇಕಡ 70ರಷ್ಟು ಬೆಂಕಿಯನ್ನು ನಂದಿಸಲಾಗಿದೆ. ಗಾಯಗೊಂಡ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬೆಂಕಿ ಇಡೀ ಕಾರ್ಖಾನೆಗೆ(factory) ಆವರಿಸಿಕೊಂಡಿದ್ದರಿಂದ ನಂದಿಸುವ ಕೆಲಸ ಸಾಕಷ್ಟು ಕಷ್ಟದಿಂದ ಕೂಡಿತ್ತು. ಒಳಗಡೆ ಹಲವು ಮಂದಿ ಸಿಲುಕಿರಬಹುದು. ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲವೆಂದು ಉಪ ಆಯುಕ್ತ ಮೊಹಮ್ಮದ್ ರೋಷನ್ ಹೇಳಿದ್ದಾರೆ.
ಪೊಲೀಸ್ ಕಮಿಷನರ್ ಐಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಹಾಗೂ ಹಲವು ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸುಟ್ಟಗಾಯಾಳುಗಳಿಗೆ ಚಿಕಿತ್ಸೆ ನೀಡಲು 200 ಬೆಡ್ ಗಳ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.