ಪ್ರಜಾಸ್ತ್ರ ಸುದ್ದಿ
ಝಾನ್ಸಿ(Jhansi ): ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ವೈದ್ಯಕೀಯ(Medical Hospital) ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ ಸೃಷ್ಟಿಯಾಗಿ 10 ನವಜಾತ ಶಿಶುಗಳು(Newborns) ಮೃತಪಟ್ಟ ದಾರುಣ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಶಾರ್ಟ್ ಸರ್ಕೀಟ್ ನಿಂದಾಗಿ ಅನಾಹುತವಾಗಿದೆ ಎಂದು ಹೇಳಲಾಗುತ್ತಿದೆ. ಬೆಂಕಿ ಹೊತ್ತಿಕೊಂಡು ಮಕ್ಕಳ ವಾರ್ಡಿಗೆ ಆವರಿಸಿದ ಪರಿಣಾಮ ಇಂತಹದೊಂದು ದುರಂತ ನಡೆದಿದೆ ಎನ್ನಲಾಗುತ್ತಿದೆ.
ಮಕ್ಕಳ ನಿಗಾ ಘಟಕದಲ್ಲಿ ಬೆಂಕಿ ವ್ಯಾಪಿಸಿಕೊಂಡಿದೆ. ಪೋಷಕರು, ಸಿಬ್ಬಂದಿ ಕಿರುಚಾಡುವುದು ವಿಡಿಯೋದಲ್ಲಿ ಕಾಣಿಸುತ್ತೆ. ಕಿಟಕಿಯ ಗಾಜುಗಳನ್ನು ಒಡೆದು ಅದರಿಂದ ಹೊರಗೆ ಕಳಿಸುವ ಕೆಲಸ ಮಾಡಲಾಗಿದೆ. ಇಲ್ಲಿ 54 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದರು. ಹಲವು ಮಕ್ಕಳು ಗಾಯಗೊಂಡಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ಪಡೆದಿದ್ದು, ತನಿಖೆ ನಡೆಸಲು ಸೂಚಿಸಿದ್ದಾರೆ. ಝಾನ್ಸಿ ಕಮಿಷನರ್ ಹಾಗೂ ಡಿಐಜಿಗೆ(DIG) ಘಟನೆಯ ತನಿಖೆಗೆ ಆದೇಶ ನೀಡಲಾಗಿದೆ.