ಪ್ರಜಾಸ್ತ್ರ ಅಪರಾಧ ಸುದ್ದಿ
ಆನೇಕಲ್(Aanekal): ಪುರಸಭೆ ಸದಸ್ಯ ಸ್ಕ್ರಾಪ್ ರವಿ ಹತ್ಯೆ ಪ್ರಕರಣದ ಆರೋಪಿ, ರೌಡಿ ಶೀಟರ್ ಕಾರ್ತಿಕ್ ಅಲಿಯಾಸ್ ಜೆಕೆ ಕಾಲಿಗೆ ಪೊಲೀಸರು ಗುಂಡೇಟು ಹಾರಿಸಿ ಬಂಧಿಸಿದ್ದಾರೆ. ಮೈಸೂರಮ್ಮನದೊಡ್ಡಿ ಹತ್ತಿರ ಫೈರಿಂಗ್ ಮಾಡಲಾಗಿದೆ. ಆನೇಕಲ್ ಇನ್ಸ್ ಪೆಕ್ಟರ್ ತಿಪ್ಪೇಸ್ವಾಮಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಕಳೆದ 25ನೇ ತಾರೀಖಿನಂದು ಪುರಸಭೆ ಸದಸ್ಯ ಸ್ಕ್ರಾಪ್ ರವಿ ಆಫೀಸ್ ನಲ್ಲಿದ್ದಾಗ ರೌಡಿ ಶೀಟರ್ ಕಾರ್ತಿಕ್ ಅಲಿಯಾಸ್ ಜೆಕೆ, ವಿನಯ್ ಅಲಿಯಾಸ್ ವಿನಿ, ಹರೀಶ್ ಅಲಿಯಾಸ್ ಹಂದಿ ಹರೀಶ್ ಗ್ಯಾಂಗ್ ದಾಳಿ ಮಾಡಿ ಹತ್ಯೆ ಮಾಡಿತ್ತು. ಬಳಿಕ ತಲೆ ಮರೆಸಿಕೊಂಡಿದ್ದರು. ಬಳಿಕ ಆರೋಪಿಗಳಾದ ಹರೀಶ್, ವಿನಯ್ ಕೋರ್ಟಿಗೆ ಶರಣಾಗಿದ್ದಾರೆ. ಈಗ ಆರೋಪಿ ಕಾರ್ತಿಕ್ ನನ್ನು ಪೊಲೀಸರು ಬಂಧಿಸಿದ್ದಾರೆ.