ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಗ್ರಾಮ ಪಂಚಾಯ್ತು ಮಾಜಿ ಸದಸ್ಯ ವಿಶ್ವನಾಥ ಜಮಾದಾರ ಕೊಲೆ(Murder Case) ಪ್ರಕರಣದ ಆರೋಪಿ ಲಕ್ಷ್ಮಣ ಪೂಜಾರಿ ಮೇಲೆ ಪೊಲೀಸರು ಶನಿವಾರ ಫೈರಿಂಗ್(Firing) ನಡೆಸಿದ್ದಾರೆ. ಪೊಲೀಸರು ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಯ ಬಲಗಾಲಿಗೆ ಪಿಎಸ್ಐ ಇಂದುಮತಿ ಅವರು ಫೈರಿಂಗ್ ಮಾಡಿದ್ದಾರೆ. ಆಳಂದ ತಾಲೂಕಿನ ಮಾಡ್ಯಾಳ ಹತ್ತಿರ ಈ ಘಟನೆ ನಡೆದಿದೆ. ಆರೋಪಿಯನ್ನು ನಗರದ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಸಂಟರ್ ಗೆ ದಾಖಲಿಸಲಾಗಿದೆ.
ಆಳಂದ ತಾಲೂಕಿನ ಖಾನಾಪುರ ಕ್ರಾಸ್ ಹತ್ತಿರ ಕಳೆದ ಸೆಪ್ಟೆಂಬರ್ 13ರಂದು ವಿಶ್ವನಾಥ ಜಮಾದಾರ ಎಂಬಾತನನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣ ಆರೋಪಿ ಲಕ್ಷ್ಮಣ ಪೂಜಾರಿಯನ್ನು ಇಂದು ಗನ್(Gun) ರಿಕವರಿ ಸಲುವಾಗಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ಯತ್ನಿಸಿದ್ದಾನೆ. ಇತನ ಮೇಲೆ 11 ಪ್ರಕರಣಗಳು ದಾಖಲಾಗಿವೆ. ಕಲಬುರಗಿ, ಬೆಂಗಳೂರಿನಲ್ಲಿ ಗನ್ ಸಪ್ಲೈ ಮಾಡುತ್ತಿದ್ದ ಎನ್ನುವ ಆರೋಪ ಸಹ ಇತನ ಮೇಲಿದೆ.