ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಹೊಸ ಪ್ರತಿಭೆಗಳಿಂದ ಕೂಡಿರುವ ‘ಪ್ರೇಮ್ ಲವ್ ನಂದಿನಿ’ ಚಿತ್ರದ ಫಸ್ಟ್ ಲುಕ್ ಅನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ವಿಶ್ವಪ್ರಕಾಶ.ಟಿ ಮಲಗೊಂಡ ನಾಯಕನಾಗಿ, ಸಿರಿ ವೆಂಕಟೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸುಧಾ ಅಣ್ಣಾಶೇಠ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನ ಸಹ ಮಾಡಿದ್ದಾರೆ. ಬಸವರಾಜ ನಂದಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಕ್ಷಿತ್, ಮಧು ಅರಕೆರೆ ಸಹ ಕಲಾವಿದರಾಗಿ ಅಭಿನಯಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ಮಾಪಕ ಬಸವರಾಜ ಎಸ್ ನಂದಿ. ಪ್ರೇಮ ಕಥೆಯಿಂದ ಶುರುವಾಗಿ ಡಿವೋರ್ಸ್ ವರೆಗೆ ನಡೆಯುವ ಕಥೆಯೇ ಈ ಚಿತ್ರದ ಕಥಾಹಂದರ ಎನ್ನುತ್ತಾರೆ ನಿರ್ದೇಶಕಿ ಸುಧಾ ಅಣ್ಣಾಶೇಠ.
ಬಸವರಾಜ ನಂದಿ ಹಾಗೂ ಸಚಿನ್ ಅವರ ಛಾಯಾಗ್ರಾಹಣವಿದ್ದು, ಪ್ರಜ್ವಲ್ ನಂದಿ ಅವರ ಸಂಕಲನ, ಕ್ರಿಯೇಟಿವ್ ಹೆಡ್ ಆಗಿ ಅಣ್ಣಾಶೇಠ ಅವರು ಕಾರ್ಯ ನಿರ್ವಹಿಸಿದ್ದಾರೆ. ಪ್ರಸಾದ ತೋಟದ ಅವರ ಪೋಸ್ಟರ್ ಡಿಸೈನ್, ಮೇಕಪ್ ಮಧು, ಡಾ.ಪ್ರಭು ಗಂಜಿಹಾಳ, ಡಾ.ವಿರೇಶ್ ಹಂಡಗಿ, ಹರೀಶ್ ಅರಸು ಅವರ ಮಾಧ್ಯಮ ನಿರ್ವಹಣೆಯಿದೆ. ಉಮೇಶ್.ಕೆ.ಎನ್ ಅವರು ಪ್ರಚಾರದ ಜವಾಬ್ದಾರಿ ಹೊತ್ತಿದ್ದು, ನಿಂಗರಾಜ ಕಟ್ಟಿಗೇರಿ ಸೇರಿ ಅನೇಕರು ತಂತ್ರಜ್ಞಾನದಲ್ಲಿದ್ದಾರೆ.




