ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕೊಲಂಬೊ(colombo): ಶ್ರೀಲಂಕಾ ನೆಲದಲ್ಲಿ ನಡೆದ ಪ್ರಥಮ ಮಹಿಳಾ ಏಷ್ಯ ಕಪ್(women asia cup 2024) ಕ್ರಿಕೆಟ್ ಟೂರ್ನಿಯಲ್ಲಿ ಭಾರತ(India) ತಂಡಕ್ಕೆ ಸ್ವಲ್ಪದರಲ್ಲಿ ಕಪ್ ಕೈ ತಪ್ಪಿ ಹೋಗಿದೆ. ತವರು ನೆಲದಲ್ಲಿ ಶ್ರೀಲಂಕಾ(srilanka) ಏಷ್ಯಕಪ್ ಗೆದ್ದು ಬೀಗಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ನೀಡಿದ್ದ166 ರನ್ ಗಳ ಗುರಿಯನ್ನು ಲಂಕಾ ಪಡೆ 18.4 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿ ಕಪ್ ಗೆಲುವಿನ ಸಂಭ್ರಮ ಆಚರಿಸಿತು.
ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಟೂರ್ನಿ ಪೂರ್ತಿ ಅಬ್ಬರಿಸಿರುವ ಸ್ಮೃತಿ ಮಂದಾನ ಫೈನಲ್ ಪಂದ್ಯದಲ್ಲಿ 60 ರನ್ ಗಳಿಸಿ ಮಿಂಚಿದರು. ನಾಯಕಿ ಕೌರ್ ಕೇವಲ 11 ರನ್ ಗಳಿಸಿದರು. ಶಿಫಾಲಿ ವರ್ಮಾ 16, ಉಮಾ ಚೆಟ್ರಿ 9, ರೋಡ್ರಿಗೆಸ್ 29, ರಿಚಾ ಘೋಷ್ 30 ರನ್ ಗಳಿಸಿದರು. ಪೂಜಾ ವಸ್ತ್ರಕರ್ ಅಜೇಯ 5, ರಾಧಾ ಯಾದವ್ ಅಜೇಯ 1 ರನ್ ಗಳಿಸಿದರು. ಹೀಗಾಗಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಲಂಕಾ ಪರ ಕವಿಶಾ ದಿಲ್ಹರಿ 2, ಉದೇಶಿಕಾ, ನಿಸನಸಲಾ ಹಾಗೂ ನಾಯಕಿ ಚಮಾರಿ ತಲಾ 1 ವಿಕೆಟ್ ಪಡೆದರು.
ಸವಾಲಿನ ಗುರಿ ಬೆನ್ನು ಹತ್ತಿದ ಶ್ರೀಲಂಕಾ ಪಡೆ ಭರ್ಜರಿ ಬ್ಯಾಟಿಂಗ್ ಮಾಡಿತು. ವೈಸಮಿ 1 ರನ್ ಗೆ ರನೌಟ್ ಆದರು. ಆದರೆ, ನಾಯಕಿ ಚಮಾರಿ 61, ಹರ್ಷಿತಾ ಸಮರವಿಕ್ರಮ ಅಜೇಯ 69, ಕವಿಶಾ ದಿಲ್ಹರ್ ಅಜೇಯ 30 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಭಾರತ ಪರ ದೀಪ್ತಿ ಶರ್ಮಾ 1 ವಿಕೆಟ್ ಪಡೆದರು. ಶ್ರೀಲಂಕಾ ತಂಡದ ನಾಯಕಿ ಚಮಾರಿ ಪ್ಲೇಯರ್ ಆಫ್ ದ್ ಟೂರ್ನಿ, ಹರ್ಷಿತಾ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.