Ad imageAd image

ಸಿಂದಗಿಯಲ್ಲಿ 8 ಲಕ್ಷ ಮೌಲ್ಯದ ನಕಲಿ ಮದ್ಯ ವಶ, 6 ಜನರ ಬಂಧನ

Nagesh Talawar
ಸಿಂದಗಿಯಲ್ಲಿ 8 ಲಕ್ಷ ಮೌಲ್ಯದ ನಕಲಿ ಮದ್ಯ ವಶ, 6 ಜನರ ಬಂಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಮೊರಟಗಿ ರಸ್ತೆಯ ಹೊರವಲಯದಲ್ಲಿರುವ ಅಮೋಘಸಿದ್ಧ ಬಸಪ್ಪ ಹೂಗಾರ ಎಂಬುವರ ಹೊಲದಲ್ಲಿ ನಕಲಿ ಮದ್ಯ ತಯಾರಿಕ ಘಟಕೆ ಸ್ಥಾಪಿಸಿರುವ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 561.600 ಲೀಟರ್ ನಕಲಿ ಮದ್ಯ ಹಾಗೂ 140 ಲೀಟರ್ ಮದ್ಯಸಾರ ಹಾಗೂ ನಕಲಿ ಮದ್ಯ ತಯಾರಿಸಲು ಬೇಕಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವು ಒಟ್ಟು ಮೌಲ್ಯ 8 ಲಕ್ಷದ 42 ಸಾವಿರ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಈ ಒಂದು ದಾಳಿ ನಡೆಸಲಾಗಿದ್ದು, ಓರ್ವ ಸಿಂದಗಿ ನಿವಾಸಿ ಹಾಗೂ ಹುಬ್ಬಳ್ಳಿ ಮೂಲದ ಐವರನ್ನು ವಶಕ್ಕೆ ಪಡೆದು ಸಿಂದಗಿ ಅಬಕಾರಿ ನಿರೀಕ್ಷಕರಾದ ಶಿವಾನಂದ ಹೂಗಾರ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ವೇಳೆ ತಾಲೂಕು ಹಾಗೂ ಜಿಲ್ಲಾ ಅಬಕಾರಿ ಸಿಬ್ಬಂದಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article